ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಇಫ್ತಾರ್‌ನಲ್ಲಿ ಪಾಲ್ಗೊಂಡ ಮರುದಿನ ಅಮಿತ್‌ ಶಾರನ್ನು ಭೇಟಿಯಾದ ನಿತೀಶ್‌  

Last Updated 23 ಏಪ್ರಿಲ್ 2022, 10:14 IST
ಅಕ್ಷರ ಗಾತ್ರ

ಪಟ್ನಾ: ಒಂದು ದಿನದ ಪ್ರವಾಸಕ್ಕಾಗಿ ಬಿಹಾರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದರು.

ಮಧ್ಯಾಹ್ನ 12.20ಕ್ಕೆ ವಿಶೇಷ ವಿಮಾನದಲ್ಲಿ ‘ಜಯಪ್ರಕಾಶ್ ನಾರಾಯಣ್’ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾ ಅವರನ್ನು ರಾಜ್ಯಪಾಲ ಫಾಗು ಚೌಹಾಣ್, ಸಿಎಂ ನಿತೀಶ್ ಕುಮಾರ್, ಬಿಹಾರದ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಮತ್ತು ಇತರ ಹಿರಿಯ ನಾಯಕರು ಬರಮಾಡಿಕೊಂಡರು.

ವಿಮಾನ ನಿಲ್ದಾಣದ ವಿಐಪಿ ವಿಶ್ರಾಂತಿ ಕೊಠಡಿಯಲ್ಲಿ ಅಮಿತ್‌ ಶಾ ಮತ್ತು ನಿತೀಶ್‌ ಅವರ ನಡುವೆ ನಡೆದ ಗೌಪ್ಯ ಮಾತುಕತೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ನಿತೀಶ್ ಕುಮಾರ್ ಅವರು ಅಮಿತ್‌ ಶಾ ಮತ್ತು ಜೈಸ್ವಾಲ್ ಅವರ ಪಕ್ಕದಲ್ಲಿ ಕುಳಿತಿರುವುದು ಚಿತ್ರದಲ್ಲಿ ಕಂಡು ಬಂದಿದೆ.ಸಭೆಯ ಉದ್ದೇಶ ಸ್ಪಷ್ಟವಾಗಿಲ್ಲ.

ನಿತೀಶ್ ಕುಮಾರ್ ಅವರು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಯೋಜಿಸಿದ್ದ ಇಫ್ತಾರ್ ಕೂಟದಲ್ಗಿ ಶುಕ್ರವಾರ ಭಾಗವಹಿಸಿದ್ದರು.ಅದರ ಮರು ದಿನವೇ ಅಮಿತ್‌ ಶಾ ಮತ್ತು ನಿತೀಶ್‌ ನಡುವೆ ಗೌಪ್ಯ ಮಾತುಕತೆ ನಡೆದಿದೆ.

ಇನ್ನು ಶುಕ್ರವಾರದ ಇಫ್ತಾರ ಕೂಟದ ಬಗ್ಗೆ ಮಾತನಾಡಿದ್ದ ರಾಬ್ಡಿ ದೇವಿ ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್, ‘ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಹಸ್ಯ ಚರ್ಚೆ ನಡೆದಿದೆ’ ಎಂದು ಹೇಳಿದ್ದರು.

ಆದರೆ, ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಸಿಎಂ ನಿತೀಶ್‌, ‘ತೇಜಸ್ವಿ ಯಾದವ್ ಅವರ ಆಹ್ವಾನದ ಮೇರೆಗೆ ನಾನು ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದೆ’ ಎಂದಿದ್ದಾರೆ.

ನಿತೀಶ್ ಕುಮಾರ್ ಅವರೊಂದಿಗಿನ ಭೇಟಿಯ ನಂತರ ಶಾ ಅವರು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಜಗದೀಶ್‌ಪುರಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT