ಗುರುವಾರ , ಮೇ 19, 2022
20 °C

ಅಮಿತ್‌ ಶಾಗೆ ₹ 850 ಬೆಲೆಯ ನೀರಿನ ಬಾಟಲು ನೀಡಲಾಗಿತ್ತು: ಗೋವಾ ಕೃಷಿ ಸಚಿವ ರವಿ

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ, ಅವರಿಗೆ ₹850 ಬೆಲೆಯ ನೀರಿನ ಬಾಟಲು ನೀಡಲಾಗಿತ್ತು’ ಎಂದು ಗೋವಾ ಕೃಷಿ ಸಚಿವ ರವಿ ನಾಯ್ಕ ಮಂಗಳವಾರ ಹೇಳಿದ್ದಾರೆ.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟು ಭೀಕರವಾಗಿರಲಿದೆ ಹಾಗೂ ಮಳೆ ನೀರು ಸಂಗ್ರಹದ ಅಗತ್ಯತೆ ಕುರಿತು ವಿವರಿಸುವ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ‘ಫೆಬ್ರುವರಿಯಲ್ಲಿ ನಡೆದ ಚುನಾವಣೆ ವೇಳೆ ರಾಜ್ಯಕ್ಕೆ ಭೇಟಿ ನೀಡಿದ್ದ ಶಾ ಅವರು ಹಿಮಾಲಯ ಬ್ರ್ಯಾಂಡ್‌ನ ನೀರಿನ ಬಾಟಲು ನೀಡುವಂತೆ ಹೇಳಿದರು. ಇಲ್ಲಿಂದ 10 ಕಿ.ಮೀ. ದೂರದ ಮಾಪುಸಾದಿಂದ ₹ 850 ಬೆಲೆಯ, ಆ ಬ್ರ್ಯಾಂಡಿನ ನೀರಿನ ಬಾಟಲು ತರಿಸಿ ಕೊಡಲಾಗಿತ್ತು ’ ಎಂದು ಹೇಳಿದರು.

ಓದಿ... ಶ್ರೀಮಂತ -ಬಡವರಿಗಾಗಿ ಎರಡು ಪ್ರತ್ಯೇಕ ಭಾರತ ನಿರ್ಮಿಸಿದ್ದಾರೆ ಮೋದಿ: ರಾಹುಲ್ ಟೀಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು