ಚಂಡೀಗಢ: ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ ಮತ್ತು ಖಾಲಿಸ್ತಾನಿ ಪರ ಹೋರಾಟಗಾರ ಅಮೃತ್ ಪಾಲ್ ಸಿಂಗ್ ಭಯೋತ್ಪಾದಕ ಸಂಘಟನೆಯನ್ನು ಕಟ್ಟಲು ಮಾದಕ ದ್ರವ್ಯ ವ್ಯಸನಿಗಳು ಮತ್ತು ಮಾಜಿ ಸೈನಿಕರನ್ನೇ ಗುರಿಯಾಗಿಸಿದ್ದ ಎಂದು ಗುರುವಾರ ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತ್‌ಪಾಲ್ ಅವರ ಪಯಣ ಮತ್ತು ಯೋಜನೆಯ ಕಾರ್ಯಗತವು ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಅಪ್ಪಣೆಯ ಮೇರೆಗೆ ನಡೆಯುವ ಸಾಧ್ಯತೆ ಇತ್ತು. ದುಬೈನಿಂದ ವಾಪಸಾದ ಬಳಿಕ ಜಲ್ಲುಪುರ್ ಖೇರಾ ಗ್ರಾಮದಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಿದ್ದ. ಇದರ ಜತೆಗೆ ದುರ್ನಡತೆಯಿಂದ ನಿವೃತ್ತಿ ಹೊಂದಿರುವ ಮಾಜಿ ಸೈನಿಕರನ್ನು ಹುಡುಕಿ ಅವರನ್ನು ಶಸ್ತ್ರಾಸ್ತ್ರಗಳ ತರಬೇತಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಟ, ಹೋರಾಟಗಾರ ದೀಪು ಸಿಧುವಿನ ಮರಣದ ನಂತರ ‘ವಾರಿಸ್ ಪಂಜಾಬ್ ಡೇ‘ (ಡಬ್ಲ್ಯುಪಿಡಿ) ಸಂಘಟನೆಯ ಉಸ್ತುವಾರಿ ವಹಿಸಿಕೊಂಡು, ಇಬ್ಬರು ಖಾಸಗಿ ರಕ್ಷಣಾ ಸಿಬ್ಬಂದಿಯನ್ನು ಇರಿಸಿಕೊಂಡಿದ್ದ, ಈ ವರ್ಷ ಅವರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.
ಏಳು ಮಂದಿ ಭದ್ರತಾ ಸಿಬ್ಬಂದಿ ಯುವಕರಾಗಿದ್ದರು. ಅವರೆಲ್ಲರೂ ವ್ಯಸನ ಮುಕ್ತ ಕೇಂದ್ರಕ್ಕೆ ಬಂದವರಾಗಿದ್ದರು. ಅವರ ತಲೆಕೆಡಿಸಿ ಗನ್ ಸಂಸ್ಕೃತಿಯತ್ತ ವಾಲುವಂತೆ ಮಾಡಿ ಭಯೋತ್ಪಾದನೆಗೆ ಕುಮಕ್ಕು ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.