ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸರ್ಕಾರದ ಸಂಪುಟಕ್ಕೆ ಮತ್ತೊಬ್ಬ ರಾಜಪಕ್ಸೆ ಸೋದರ ಸೇರ್ಪಡೆ

ಅಧ್ಯಕ್ಷ ಪಟ್ಟ, ಪ್ರಧಾನಿ ಸ್ಥಾನ, ಕೃಷಿ, ಹಣಕಾಸು ಸಚಿವಾಲಯದಲ್ಲಿ ರಾಜಪಕ್ಸೆ ಸೋದರರ ಕಾರುಬಾರು
Last Updated 8 ಜುಲೈ 2021, 8:27 IST
ಅಕ್ಷರ ಗಾತ್ರ

ಕೊಲಂಬೊ: ‘ರಾಜಪಕ್ಸೆ‘ ಸಹೋದರರಲ್ಲಿ ಕಿರಿಯರಾಗಿರುವ ಬೆಸಿಲ್ ರಾಜಪಕ್ಸೆ ಅವರು ಗುರುವಾರ ಶ್ರೀಲಂಕಾ ಸರ್ಕಾರದ ಹಣಕಾಸು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ, ಪ್ರಧಾನಿ ಮಹಿಂದಾ ರಾಜಪಕ್ಸೆ, ಕೃಷಿ ಸಚಿವ ಚಮಲ್ ರಾಜಪಕ್ಸೆ ಈಗಾಗಲೇ ಅಧಿಕಾರದಲ್ಲಿದ್ದಾರೆ. 70 ವರ್ಷದಕೊನೆಯ ಸಹೋದರ ಬೆಸಿಲ್‌ ರಾಜಪಕ್ಸೆ ಈಗ ಸಚಿವ ಸಂಪುಟವನ್ನು ಪ್ರವೇಶಿಸಿದ್ದಾರೆ. ಈ ಮೂಲಕ ಸರ್ಕಾರದೊಳಗಿರುವ ತಮ್ಮ ಕುಟುಂಬದ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ.

ಬೆಸಿಲ್ ಅವರು ಸಚಿವ ಸಂಪುಟ ಪ್ರವೇಶಿಸುವ ಮೂಲಕ ರಾಜಪಕ್ಸೆ ಕುಟುಂಬದ ಏಳು ಸದಸ್ಯರು ಸರ್ಕಾರದ ಉನ್ನತ ಸ್ಥಾನಗಳಿಗೆ ಏರಿದಂತಾಗಿದೆ.

ಮಹಿಂದಾ ಅವರ ಹಿರಿಯ ಪುತ್ರ ಚಮಲ್‌ ಸಂಪುಟ ದರ್ಜೆಯ ಸಚಿವರಾಗಿದ್ದು, ಕ್ರೀಡಾ ಖಾತೆ ನಿರ್ವಹಿಸುತ್ತಿದ್ದಾರೆ. ಚಮಲ್ ರಾಜಪಕ್ಸೆ ಪುತ್ರ ಶಶೀಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿದ್ದಾರೆ. ಸರ್ಕಾರದ ಬೆನ್ನೆಲುಬಾಗಿರುವ ನಿಪುನಾ ರಣವಾಕ ಅವರು ರಾಜಪಕ್ಸೆ ಸೋದರ ಸಂಬಂಧಿ.

ಅಮೆರಿಕ ಮತ್ತು ಶ್ರೀಲಂಕಾದ ಪೌರತ್ವ ಹೊಂದಿರುವ ಬೆಸಿಲ್‌, 2020ರ ಆಗಸ್ಟ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್‌ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT