ಗುರುವಾರ , ಜನವರಿ 28, 2021
22 °C

ಆಂಧ್ರಪ್ರದೇಶ: ಉದ್ಯೋಗ ನೇಮಕಾತಿಗೂ ಡಿಜಿಟಲ್ ಸ್ವರೂಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ (ಆಂಧ್ರಪ್ರದೇಶ): ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆಂಧ್ರಪ್ರದೇಶದಲ್ಲಿ ಇನ್ನು ಮುಂದೆ ಡಿಜಿಟಲ್ ಸ್ವರೂಪದಲ್ಲಿ ನಡೆಯಲಿದ್ದು, ಉದ್ಯೋಗಾಂಕ್ಷಿಗಳು ಟ್ಯಾಬ್ಲೆಟ್‌ನಲ್ಲಿ ಡಿಜಿಟಲ್ ಕ್ರಮದಲ್ಲೇ ಪರೀಕ್ಷೆ ಎದುರಿಸಬೇಕಾಗಿದೆ.

ಆಂಧ್ರಪ್ರದೇಶ ಲೋಕಸೇವಾ ಆಯೋಗ (ಎಪಿಪಿಎಸ್‌ಸಿ) ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಪ್ರಮಾಣದಲ್ಲಿ ಡಿಜಿಟಲ್‌ ರೂಪಕ್ಕೆ ಪರಿವರ್ತಿಸಿದೆ. ಸಾಂಪ್ರದಾಯಿಕ ಉತ್ತರ ಪತ್ರಿಕೆಗಳಿಗೆ ಬದಲಾಗಿ ಟ್ಯಾಬ್ಲೆಟ್‌ಗಳು ಸ್ಥಾನ ಪಡೆಯಲಿವೆ. ಗ್ರೂಪ್–1, ಗ್ರೂಪ್–2 ಮತ್ತು ಗ್ರೂಪ್–3 ಹಂತದ ಹುದ್ದೆಗಳಿಗೆ ಈ ಕ್ರಮದಲ್ಲಿ ನೇಮಕಾತಿ ನಡೆಯಲಿದೆ.

ಗ್ರೂಪ್–1ರ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಿದ್ದು, ಡಿಜಿಟಲ್ ಸ್ವರೂಪದಲ್ಲಿಯೇ ಮೌಲ್ಯಮಾಪನ ನಡೆಯಲಿದೆ. ಅಧಿಸೂಚನೆ ಹೊರಡಿಸಲಾದ ಎಲ್ಲ ಹುದ್ದೆಗಳ ನೇಮಕಾತಿಗೆ ತಮ್ಮ ವಿದ್ಯಾರ್ಹತೆಗೆ ಅನುಸಾರವಾಗಿ ಒಂದೇ ಹಂತದಲ್ಲಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಲಾಗಿದೆ.

ಆಂಧ್ರಪ್ರದೇಶ ಲೋಕಸೇವಾ ಆಯೋಗದ ಈ ಕ್ರಮದಿಂದ ಪ್ರೇರೇಪಿತವಾಗಿರುವ ನೆರೆಯ ತಮಿಳುನಾಡು ಕೂಡಾ ರಾಜ್ಯದ ನೇಮಕಾತಿ ಪ್ರಕ್ರಿಯೆಯಲ್ಲಿ ಇದೇ ಕ್ರಮವನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.

ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಾಗಿದೆ. ನೂತನ ವ್ಯವಸ್ಥೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಯಾವುದೇ ನಕಲು, ಲೋಪಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ, ನೇಮಕಾತಿ ಪ್ರಕ್ರಿಯೆಯನ್ನೂ ಇನ್ನಷ್ಟು ಸರಳವಾಗಿಸಲಿದೆ ಎಂದು ಎಪಿಪಿಎಸ್‌ಸಿ ಕಾರ್ಯದರ್ಶಿ, ಐಪಿಎಸ್ ಅಧಿಕಾರಿ ಪಿ.ಎಸ್.ಆರ್.ಆಂಜನೇಯುಲು ಹೇಳಿದ್ದಾರೆ.

ಮುಖ್ಯಮಂತ್ರಿ ಅವರ ಸೂಚನೆ ಆಧರಿಸಿ ನಾವು ಐಐಟಿ ಮತ್ತು ಐಐಎಂ ಪರೀಕ್ಷೆ ನಡೆಸುವ ಕ್ರಮವನ್ನು ಅಧ್ಯಯನ ಮಾಡಿದೆವು ಹಾಗೂ ನೇಮಕಾತಿ ಪ್ರಕ್ರಿಯೆಗೆ ಅನುಗುಣವಾಗಿ ಜಾರಿಗೊಳಿಸಿದೆವು ಎಂದು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು