ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲಪ್ರದೇಶ: ಸೇನೆ ಹೆಲಿಕಾಪ್ಟರ್‌ ಪತನ, ಇಬ್ಬರ ಸಾವು

Last Updated 21 ಅಕ್ಟೋಬರ್ 2022, 10:58 IST
ಅಕ್ಷರ ಗಾತ್ರ

ಇಟಾನಗರ, ಅರುಣಾಚಲ ಪ್ರದೇಶ: ಸೇನೆಯ ‘ಸುಧಾರಿತ ಲಘು ಹೆಲಿಕಾಪ್ಟರ್‌’ (ಎಎಲ್‌ಎಚ್‌) ಅರುಣಾಚಲಪ್ರದೇಶದ ಅಪ್ಪರ್‌ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್‌ ಎಂಬಲ್ಲಿ ಶುಕ್ರವಾರ ಪತನಗೊಂಡಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಹೆಲಿಕಾಪ್ಟರ್‌ನಲ್ಲಿ ಐದು ಮಂದಿ ಇದ್ದರು. ದೈನಂದಿನ ತಾಲೀಮು ನಿರತವಾಗಿದ್ದ ಸಂದರ್ಭದಲ್ಲಿ ಬೆಳಿಗ್ಗೆ 10.43ರ ವೇಳೆಗೆ ಹೆಲಿಕಾಪ್ಟರ್ ಪತನವಾಯಿತು. ಘಟನಾ ಸ್ಥಳದಲ್ಲಿ ಇಬ್ಬರ ಶವಗಳು ಸಿಕ್ಕಿವೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಪತನವಾದ ಪ್ರದೇಶ ಪರ್ವತಗಳಿಂದ ಕೂಡಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ.

ರಾಜ್ಯದಲ್ಲಿ ಈ ತಿಂಗಳು ಸೇನೆಯ ಹೆಲಿಕಾಪ್ಟರ್‌ ಪತನಗೊಂಡ ಎರಡನೇ ಘಟನೆ ಇದಾಗಿದೆ. ಅಕ್ಟೋಬರ್ 5ರಂದು ತವಾಂಗ್‌ ಜಿಲ್ಲೆಯಲ್ಲಿ ಚೀತಾ ಹೆಲಿಕಾಪ್ಟರ್‌ ಪತನವಾಗಿ, ಒಬ್ಬ ಪೈಲಟ್ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT