ಜಮ್ಮು : ಹಿಮಪಾತದಿಂದ ಆವೃತವಾಗಿರುವ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾಡಾ ಜಿಲ್ಲೆಯ ಕುಗ್ರಾಮ ನವಾಪಾಚಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಭೂ ಹಾಗೂ ವಾಯುಸೇನೆಯ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಇದರಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾಮದಿಂದ ಸೇನೆಗೆ ಕರೆ ಬರುತ್ತದೆ. ಈ ವೇಳೆ ಎಂಐ ಹೆಲಿಕಾಪ್ಟರ್ ಮೂಲಕ ವಾಯುಸೇನೆಯ ತಂಡವೊಂದು ಹಿಮಾವೃತ ನವಾಪಾಚಿ ಗ್ರಾಮಕ್ಕೆ ಹೋಗಿ, ಗರ್ಭಿಣಿಯನ್ನು ಕಿಶ್ತ್‌ವಾಡಾ ನಗರಕ್ಕೆ ಕರೆತಂದಿತು’ ಎಂದು ಸೇನಾ ವಕ್ತಾರ ಲೆ.ಕರ್ನಲ್ ದೇವೇಂದ್ರ ಆನಂದ್ ಅವರು ಮಾಹಿತಿ ನೀಡಿದರು.
ನವಾಪಾಚಿ ಗ್ರಾಮಸ್ಥರು ಭೂ ಹಾಗೂ ವಾಯುಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸೇನೆಯ ಕುರಿತು ಜಯಘೋಷಗಳನ್ನು ಕೂಗಿದ್ದಾರೆ. ‘ಭಯೋತ್ಪಾದನೆ ನಿಗ್ರಹ ಕಾರ್ಯಚರಣೆಯಲ್ಲಿ ಮಾತ್ರ ಸೇನೆ ತೊಡಗುವುದಿಲ್ಲ. ಜನರ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತದೆ’ ಎಂದು ಲೆ.ಕರ್ನಲ್ ದೇವೇಂದ್ರ ಆನಂದ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.