ಮಂಗಳವಾರ, ಡಿಸೆಂಬರ್ 7, 2021
19 °C

ಡ್ರಗ್ಸ್‌ ಪ್ರಕರಣ: ಗೋಸಾವಿ, ಶಾರುಕ್‌ ಮ್ಯಾನೇಜರ್ ಭೇಟಿ ನಡೆದಿತ್ತು–ಎನ್‌ಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಆರೋಪಿ ಆರ್ಯನ್‌ ಖಾನ್‌ ಜೊತೆಗಿನ ಸೆಲ್ಫಿ ಫೋಟೊದಲ್ಲಿ ಗೋಸಾವಿ– ವೈರಲ್‌ ಆಗಿರುವ ಚಿತ್ರ

ಮುಂಬೈ: ಡ್ರಗ್ಸ್‌ ಪ್ರಕರಣದ ಆರೋಪಿ ಆರ್ಯನ್‌ ಖಾನ್‌ ಜೊತೆಗಿನ ಸೆಲ್ಫಿ ಫೋಟೊದಿಂದ ಸುದ್ದಿಯಾದ ಕೆ.ಪಿ.ಗೋಸಾವಿ ಅವರು ನಟ ಶಾರುಕ್‌ ಖಾನ್‌ ಮ್ಯಾನೇಜರ್‌ ಜೊತೆಗೆ ಭೇಟಿ ನಡೆದಿರುವುದಾಗಿ ಎನ್‌ಸಿಬಿ ಒಪ್ಪಿಕೊಂಡಿದೆ.

ಶಾರುಕ್‌ ಅವರ ಮ್ಯಾನೇಜರ್‌ ಪೂಜಾ ದದಲಾನಿ ಅವರನ್ನು ಕೆ.ಪಿ.ಗೋಸಾವಿ ಭೇಟಿಯಾಗಿರುವುದನ್ನು ಎನ್‌ಸಿಬಿ ಸ್ಪಷ್ಟಪಡಿಸಿದೆ. ಆರ್ಯನ್‌ ಖಾನ್‌ ಬಿಡುಗಡೆಗೆ ₹24 ಕೋಟಿ ಬೇಡಿಕೆ ಇಡಲಾಗಿತ್ತು ಎಂದು ಮುಂಬೈ ನಿವಾಸಿ, ಪ್ರಕರಣದ ಸಾಕ್ಷಿಧಾರರಾಗಿರುವ ಪ್ರಭಾಕರ್‌ ಸೈಲ್‌ ಆರೋಪಿಸಿದ್ದರು.

ಗೋಸಾವಿ ಮತ್ತು ಸ್ಯಾಮ್‌ ಡಿಸೋಜಾ ಸೇರಿ ಬಿಡುಗಡೆಯ ಡೀಲ್‌ ಮಾತುಕತೆ ನಡೆಸಿದ್ದರು. ಅಂತಿಮವಾಗಿ ₹18 ಕೋಟಿಗೆ ಒಪ್ಪಂದವಾಗಿತ್ತು ಹಾಗೂ ಅದರಲ್ಲಿ ₹8 ಕೋಟಿ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆಗೆ ಸೇರುವ ಸಾಧ್ಯತೆ ಇತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ–

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು