ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2022 ಆಸಿಯಾನ್‌–ಭಾರತ ಸ್ನೇಹ ವರ್ಷ’: ಪ್ರಧಾನಿ ಮೋದಿ ಘೋಷಣೆ

Last Updated 28 ಅಕ್ಟೋಬರ್ 2021, 13:49 IST
ಅಕ್ಷರ ಗಾತ್ರ

ನವದೆಹಲಿ: ಆಸಿಯಾನ್‌ ಕೂಟ ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

2022ರ ವರ್ಷವನ್ನು ‘ಆಸಿಯಾನ್–ಭಾರತ ಸ್ನೇಹ ವರ್ಷ’ ಎಂದು ಆಚರಿಸಲಾಗುವುದು ಎಂದು ಇದೇ ವೇಳೆ ಅವರು ಘೋಷಿಸಿದರು.‌

ಭಾರತ–ಆಸಿಯಾನ್‌ ಶೃಂಗಸಭೆಯನ್ನು ಉದ್ದೇಶಿಸಿ ವರ್ಚುವಲ್‌ ವಿಧಾನದ ಮೂಲಕ ಮಾತನಾಡಿದ ಅವರು, ಭಾರತದ ಇಂಡೊ–ಪೆಸಿಫಿಕ್‌ ಸಾಗರಗಳ ಯೋಜನೆಯು (ಐಪಿಒಪಿ) ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಆಸಿಯಾನ್‌ ಕೂಟದ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಮತ್ತು ಪರಸ್ಪರ ಸಹಕಾರ ನೀಡುವುದಾಗಿದೆ ಎಂದು ಅವರು ಹೇಳಿದರು.

‘ಕೋವಿಡ್‌ ಪಿಡುಗಿನಿಂದ ಭಾರತ–ಆಸಿಯಾನ್ ಕೂಟದ ಸ್ನೇಹಕ್ಕೂ ಪರೀಕ್ಷೆಯ ಸಮಯವಾಗಿತ್ತು. ಆದರೆ ಪಿಡುಗಿನ ಈ ಯುಗದಲ್ಲಿ ನಮ್ಮ ಪರಸ್ಪರ ಸಹಕಾರ, ಸಹಾನುಭೂತಿಯಿಂದ ಭವಿಷ್ಯದಲ್ಲೂ ನಮ್ಮ ಸ್ನೇಹ ಮುಂದುವರಿಯುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.

‘2022ರ ವರ್ಷದಲ್ಲಿ ನಮ್ಮ ನಡುವಿನ ಸಹಭಾಗಿತ್ವವು 30 ವರ್ಷಗಳನ್ನು ಪೂರೈಸಲಿದೆ. ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಈ ಮೈಲುಗಲ್ಲನ್ನು ಸಂಭ್ರಮಿಸಲು ನಾವು ‘ಆಸಿಯಾನ್‌–ಭಾರತದ ಸ್ನೇಹ ವರ್ಷ’ ಎಂದು ಆಚರಿಸಲು ನನಗೆ ಬಹಳ ಹರ್ಷವಾಗುತ್ತದೆ’ ಎಂದು ಅವರು ಹೇಳಿದರು.

10 ರಾಷ್ಟ್ರಗಳ ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆಯು ಈ ಪ್ರದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಭಾರತ, ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ಇತರ ದೇಶಗಳು ಈ ಕೂಟದ ಪಾಲುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT