ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಭಾಷಾ ಪ್ರಶ್ನೆ ಪತ್ರಿಕೆಯೂ ಬಹಿರಂಗ

Last Updated 17 ಮಾರ್ಚ್ 2023, 14:50 IST
ಅಕ್ಷರ ಗಾತ್ರ

ಗುವಾಹಟಿ: ಪ್ರೌಢ ಶಿಕ್ಷಣ ಮಂಡಳಿ, ಅಸ್ಸಾಂನ (ಎಸ್‌ಇಬಿಎ) 10ನೇ ತರಗತಿಯ ಅಸ್ಸಾಂ ಭಾಷಾ ಪ್ರಶ್ನೆಪತ್ರಿಕೆ ಕೂಡಾ ಸೋರಿಕೆ ಆಗಿರುವುದು ಪೊಲೀಸ್‌ ತನಿಖೆ ವೇಳೆ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಇಬಿಎಯ ಭಾರತೀಯ ಮಾತೃಭಾಷೆಯ (ಎಂಐಎಲ್‌) ಎಲ್ಲಾ ವಿಷಯಗಳ ಪರೀಕ್ಷೆಗಳನ್ನು ಮುಂದೂಡಲು ಮಂಡಳಿ ನಿರ್ಧರಿಸಿದೆ.

‘ಸಾಮಾನ್ಯ ವಿಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಬೆಳಕಿಗೆ ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ, ಲಖೀಂಪುರ ಜಿಲ್ಲೆಯ ಲ್ಯೂಟ್‌ ಕಬಾಲು ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಉಸ್ತುವಾರಿ ಪ್ರಣಬ್‌ ದತ್ತಾ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ ವೇಳೆ ಅಸ್ಸಾಂ ಭಾಷಾ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಬಹಿರಂಗವಾಯಿತು. ಈ ಕುರಿತು ನಾವು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದೆವು. ಅವರು ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದರು’ ಎಂದು ಅಸ್ಸಾಂ ಪೊಲೀಸ್‌ ಮಹಾನಿರ್ದೇಶಕರು ತಿಳಿಸಿದ್ದಾರೆ.

ಹೊಸ ವೇಳಾಪಟ್ಟಿಯ ಅನ್ವಯ, ಮಾರ್ಚ್‌ 18ರಂದು ನಿಗದಿಯಾಗಿದ್ದ ಎಂಐಎಲ್‌ನ ಎಲ್ಲಾ ವಿಷಯಗಳ ಪರೀಕ್ಷೆಗಳನ್ನು ಏಪ್ರಿಲ್‌ 1ರಂದು ನಿಗದಿಪಡಿಸಲಾಗಿದೆ. ಮಾರ್ಚ್‌ 13ರಂದು ನಿಗದಿಯಾಗಿದ್ದ ಸಾಮಾನ್ಯ ವಿಜ್ಞಾನ ಪರೀಕ್ಷೆಯನ್ನು ಮಾರ್ಚ್‌ 31 ನಡೆಸಲು ಎಸ್‌ಇಬಿಎ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT