ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ವಿಧಾನಸಭೆ ಚುನಾವಣೆ: 2ನೇ ಹಂತ ಶಾಂತಿಯುತ

ನಿರ್ಣಾಯಕ ಬರಾಕ್ ಕಣವೆಯಲ್ಲಿ ಮತದಾನ
Last Updated 2 ಏಪ್ರಿಲ್ 2021, 1:53 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂ ವಿಧಾನಸಭೆಗೆ ಗುರುವಾರ ನಡೆದ ಎರಡನೇ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯವಾಯಿತು. ಸಂಜೆ ಆರು ಗಂಟೆಯವರೆಗಿನ ಮಾಹಿತಿ ಪ್ರಕಾರ, ಶೇ 74.79ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. 126ರ ಪೈಕಿ 39 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

ಬಂಗಾಳಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬರಾಕ್ ಕಣಿವೆ, ಅಸ್ಸಾಂನ ಕೇಂದ್ರ ಭಾಗ ಹಾಗೂ ರಾಜ್ಯದ ಪಶ್ಚಿಮ ಭಾಗದ ವಿಧಾನಸಭಾ ಕ್ಷೇತ್ರಗಳ ಜನರು ಮತ ಚಲಾಯಿಸಿದರು. 346 ಅಭ್ಯರ್ಥಿಗಳು ಈ ಪ್ರದೇಶದಲ್ಲಿ ಕಣದಲ್ಲಿದ್ದಾರೆ.

ಮತ ಚಲಾಯಿಸಿ ಮಾತನಾಡಿದ ಸಿಲ್ಚಾರ್‌ನ ಬಿಜೆಪಿ ಸಂಸದ ರಾಜ್‌ದೀಪ್ ರಾಯ್, ‘ಬರಾಕ್ ಕಣಿವೆಯ ವಿಧಾನಸಭಾ ಕ್ಷೇತ್ರಗಳಲ್ಲಿ 14ರ ಪೈಕಿ 12ರಲ್ಲಿ ಗೆಲ್ಲಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಛಾರ್, ಕರೀಮ್‌ಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳನ್ನು ಒಳಗೊಂಡ ಬರಾಕ್ ಕಣಿವೆಯಲ್ಲಿ 15 ಕ್ಷೇತ್ರಗಳಿವೆ. 2016ರಲ್ಲಿ ಬಿಜೆಪಿಯು ಬಂಗಾಳಿ ಹಿಂದೂಗಳ ಪ್ರಾಬಲ್ಯವಿರುವ ಎಂಟು ಕ್ಷೇತ್ರಗಳನ್ನು ಗೆದ್ದಿದ್ದರೆ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ನಾಲ್ಕು ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT