ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಪ್ರವಾಹದಲ್ಲಿ ಕೊಚ್ಚಿ ಹೋದ ಪಿಎಸ್‌ಐ, ಕಾನ್‌ಸ್ಟೆಬಲ್ 

Last Updated 20 ಜೂನ್ 2022, 12:26 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಸಹಾಯ ಮಾಡಲು ತೆರಳಿದ್ದ ಕಾನ್‌ಸ್ಟೆಬಲ್‌ ಹಾಗೂ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅವರ ಶವಗಳು ಸೋಮವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

’ಪ್ರವಾಹ ಪೀಡಿತಪಚೋನಿಜರ್ ಮಧುಪುರ್ ಗ್ರಾಮಕ್ಕೆ ಭಾನುವಾರ ರಾತ್ರಿ ಕಂಪುರ್‌ ಪೊಲೀಸ್ ಠಾಣಾಧಿಕಾರಿ ಸಮ್ಮುಜಲ್‌ ಕಾಕೋಟಿ ಅವರು ನಾಲ್ವರು ಸಿಬ್ಬಂದಿಯೊಂದಿಗೆ ದೋಣಿಯಲ್ಲಿ ತೆರಳಿದ್ದರು.ಆದರೆ, ಪೊಲೀಸರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದರು. ಇಬ್ಬರು ಪೊಲೀಸರನ್ನು ರಕ್ಷಿಸಲಾಗಿದೆ. ಎಸ್‌ಡಿಆರ್‌ಎಫ್ ಸಿಬ್ಬಂದಿ ಹಲವು ತಾಸು ಹುಡುಕಾಟದ ನಂತರ ಸೋಮವಾರ ಮುಂಜಾನೆ ಕಾಕೋಟಿ ಸೇರಿದಂತೆ ಇಬ್ಬರ ಮೃತದೇಹಗಳನ್ನು ಹೊರತೆಗೆದರು‘ ಎಂದು ಡಿಜಿಪಿ ಜಿ.ಪಿ.ಸಿಂಗ್ ತಿಳಿಸಿದರು.

’ಸಬ್ ಇನ್‌ಸ್ಪೆಕ್ಟರ್‌ ಸಮ್ಮುಜಲ್ ಕಾಕೋಟಿ ಮತ್ತು ಕಾನ್‌ಸ್ಟೇಬಲ್ ರಾಜೀಬ್ ಬೊರ್ಡೊಲೊಯ್ ಅವರ ಧೈರ್ಯ ಮತ್ತು ಶೌರ್ಯವನ್ನು ಸ್ಮರಿಸುತ್ತೇವೆ. ಅವರ ನಿಸ್ವಾರ್ಥ ಕಾರ್ಯ ಅಸ್ಸಾಂ ಪೊಲೀಸ್ ಸಿಬ್ಬಂದಿಯ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿದೆ‘ ಎಂದು ಸಿಂಗ್ ಹೇಳಿದರು.

ಪ್ರವಾಹದಿಂದ 34 ಜಿಲ್ಲೆಗಳಲ್ಲಿ ತೊಂದರೆ ಉಂಟಾಗಿದ್ದು, 71 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT