ಶನಿವಾರ, ಜೂನ್ 12, 2021
28 °C

ತ್ರಿಪುರ: ಕೋವಿಡ್ ಕೇರ್ ಕೇಂದ್ರದಿಂದ ಕನಿಷ್ಠ 25 ಸೋಂಕಿತರು ಪರಾರಿ

ಪಿಟಿಐ‌ Updated:

ಅಕ್ಷರ ಗಾತ್ರ : | |

ಅಗರ್ತಲ: ಕೋವಿಡ್ ಕೇರ್ ಕೇಂದ್ರದಿಂದ ಕನಿಷ್ಠ 25 ಮಂದಿ ಸೋಂಕಿತರು ಪರಾರಿಯಾದ ಘಟನೆ ತ್ರಿಪುರಾದ ಅಂಬಸ್ಸದಲ್ಲಿ ನಡೆದಿದೆ. ಪರಾರಿಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದ್ದು ಏಳು ಮಂದಿಯನ್ನು ರೈಲು ನಿಲ್ದಾಣದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬಸ್ಸದ ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ಕಟ್ಟಡದಲ್ಲಿರುವ ಕೇಂದ್ರದಿಂದ ಸೋಮವಾರ ರಾತ್ರಿ ಸೋಂಕಿತರು ಪರಾರಿಯಾಗಿದ್ದಾರೆ. ಇವರೆಲ್ಲ ಇತರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು ಎಂದು ಅಂಬಸ್ಸ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹಿಮಾದ್ರಿ ಸರ್ಕಾರ್ ತಿಳಿಸಿದ್ದಾರೆ.

ಓದಿ: 

ಘಟನೆ ಬಗ್ಗೆ ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ಪ್ರಕಾರ, 18 ಮಂದಿ ಸೋಂಕಿತರು ಇತರ ರಾಜ್ಯಗಳಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 22ರಂದು ಅಗರ್ತಲದಿಂದ 31 ಮಂದಿ ಕೋವಿಡ್ ಸೋಂಕಿತರು ಪರಾರಿಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು