ಭಾನುವಾರ, ಮೇ 22, 2022
29 °C

ಮರು ಚುನಾಯಿತ ಅಸ್ಸಾಂ ಶಾಸಕರ ಸರಾಸರಿ ಆಸ್ತಿ ಶೇ 95 ರಷ್ಟು ಹೆಚ್ಚಳ !

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಅಸ್ಸಾಂ ವಿಧಾನಸಭೆಗೆ ಮರು ಚುನಾಯಿತರಾಗಿರುವ ಶಾಸಕರ ಆಸ್ತಿ ಗಳಿಕೆಯ ಪ್ರಮಾಣದಲ್ಲಿ ಶೇ 95ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

2016 ಚುನಾವಣೆಯಲ್ಲಿ ಮರು ಆಯ್ಕೆಯಾಗಿರುವ 34 ಶಾಸಕರ ಆಸ್ತಿ ಗಳಿಕೆ ಕುರಿತು ಅಸ್ಸಾಂ ಎಲೆಕ್ಷನ್ ವಾಚ್ ಸಂಸ್ಥೆ ವಿಶ್ಲೇಷಣೆ ಮಾಡಿದೆ. ಆ ಪ್ರಕಾರ, 2016 ರಲ್ಲಿ ಮರು ಆಯ್ಕೆಯಾದ ಶಾಸಕರ ಆಸ್ತಿಯ ಸರಾಸರಿ ಬೆಳವಣಿಗೆ ₹1.48 ಕೋಟಿ ಆಗಿದ್ದು, ಇದು ಶೇಕಡಾ 95 ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಅತಿ ಹೆಚ್ಚು ಆಸ್ತಿ ಗಳಿಕೆಯ ಪಟ್ಟಿಯಲ್ಲಿರುವ ಪ್ರಮುಖ ಐವರು ಶಾಸಕರಲ್ಲಿ ಅಸ್ಸಾಂ ಪ್ರವಾಸೋದ್ಯಮ ಸಚಿವ ಚಂದನ್ ಬ್ರಹ್ಮ ಅಗ್ರ ಸ್ಥಾನದಲ್ಲಿದ್ದಾರೆ. ಬ್ರಹ್ಮ ಅವರ ಜತೆಗೆ, ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಮತ್ತು ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಮಹಾಂತ ಅವರ ಸರಾಸರಿ ಆಸ್ತಿ ಗಳಿಕೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಬೊಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್ ‌(ಬಿಎಫ್‌ಪಿ) ಪಕ್ಷದ ಚಂದನ್ ಬ್ರಹ್ಮ, ಆಸ್ತಿ ಗಳಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಂತರದಲ್ಲಿ ಎಐಯುಡಿಎಫ್‌ನ ಅಬ್ದುರ್ ರಹೀಂ ಅಜ್ಮಲ್, ಕಾಂಗ್ರೆಸ್‌ನ ನಜ್ರುಲ್ ಇಸ್ಲಾಂ, ಬಿಜೆಪಿಯ ಶರ್ಮಾ ಮತ್ತು ಎಜಿಪಿಯ ಮಹಂತಾ ಅವರಿದ್ದಾರೆ.

ಬ್ರಹ್ಮ ಅವರ ಆಸ್ತಿ 2011ರಲ್ಲಿ ₹2 ಕೋಟಿ ಇತ್ತು. 2016ರಲ್ಲಿ ₹9 ಕೋಟಿಗೆ ಏರಿದೆ. ಇದು ಶೇಕಡಾ 268 ರಷ್ಟು ಹೆಚ್ಚಳವಾಗಿದೆ. ಅಜ್ಮಲ್ ಅವರದ್ದು ₹6 ಕೋಟಿ ₹ 13 ಕೋಟಿಗೆ ಏರಿಕೆಯಾಗಿದೆ.

2016 ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಶರ್ಮಾ, ₹3ಕೋಟಿಯಿಂದ ₹6 ಕೋಟಿಗೆ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಂದರೆ, ಸರಾಸರಿ ಆಸ್ತಿ ಗಳಿಕೆಯಲ್ಲಿ ಶೇ 108 ರಷ್ಟು ಬೆಳವಣಿಗೆ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು