ಗುರುವಾರ , ಅಕ್ಟೋಬರ್ 1, 2020
20 °C

Ayodhya Ram Mandir Updates: ಆಗಸ್ಟ್ 5 ಐತಿಹಾಸಿಕ ದಿನ ಎಂದ ಬಾಬಾ ರಾಮ್‌ ದೇವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧು–ಸಂತರು, ರಾಜಕಾರಣಿಗಳು ಸೇರಿದಂತೆ ಒಟ್ಟು 175 ಮಂದಿ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಟ್ರಸ್ಟ್ ಆಹ್ವಾನಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಹೆಚ್ಚು ಜನ ಸ್ಥಳಕ್ಕೆ ಬರಬಾರದೆಂದು ಮನವಿಯನ್ನೂ ಮಾಡಿದೆ. ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಭೂಮಿಪೂಜೆ ಕಾರ್ಯಕ್ರಮದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿದೆ.

***

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಆಗಸ್ಟ್ 5 ಐತಿಹಾಸಿಕ ದಿನ ಎಂದ ಬಾಬಾ ರಾಮ್‌ ದೇವ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆಗಸ್ಟ್ 5 'ಐತಿಹಾಸಿಕ ದಿನ' ಎಂದು ಯೋಗಗುರು ರಾಮ್‌ದೇವ್ ತಿಳಿಸಿದರು.

 

ರಾಮದುರ್ಗದ ಶಬರಿಕೊಳ್ಳದಲ್ಲಿ ಸಂಭ್ರಮ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿಪೂಜೆ ನೆರವೇರುತ್ತಿರುವ ಅಂಗವಾಗಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಶಬರಿಕೊಳ್ಳದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ರಾಮದುರ್ಗ ಮಂಡಲದ ವತಿಯಿಂದ ಬುಧವಾರ ವಿವಿಧ ಕಾರ್ಯಕ್ರಮಗಳು ನಡೆದವು.

 

ರಾಮ ಮಂದಿರ ಭೂಮಿ ಪೂಜೆಗೆ ಮುಹೂರ್ತ ನೀಡಿದ್ದು ಬೆಳಗಾವಿಯ ಜ್ಯೋತಿಷಿ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಆಗಸ್ಟ್ 5 ರಂದು ನಡೆಯಲಿದೆ. ಭೂಮಿ ಪೂಜೆಗೆ ಮುಹೂರ್ತವನ್ನು ನಿಗದಿಪಡಿಸಿರುವುದು ಬೆಳಗಾವಿಯ ಗೋವಾವೇಸ್ ವೃತ್ತ ಸಮೀಪದ ವಿದ್ಯಾವಿಹಾರ ವಿದ್ಯಾಲಯದ ಮುಖ್ಯಸ್ಥ ಪಂಡಿತ್ ಎನ್.ಆರ್. ವಿಜಯೇಂದ್ರ ಶರ್ಮಾ. 

 

ರಾಮಮಂದಿರಕ್ಕೆ ಭೂಮಿ ಪೂಜೆ: ’ಜೈಶ್ರೀರಾಮ್‌, ಜೈ ಭಜರಂಗಬಲಿ’ ಎಂದ ಕೇಜ್ರಿವಾಲ್

ಭವಿಷ್ಯದಲ್ಲಿ ಭಾರತವು ಇಡೀ ಜಗತ್ತಿಗೆ ದಾರಿ ದೀಪವಾಗಲಿ. ಜೈ ಶ್ರೀರಾಮ್‌, ಜೈ ಬಜರಂಗ ಬಲಿ’ ಎಂದು ಅವರು ಬುಧವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. 

 

ಅಯೋಧ್ಯೆ ರಾಮ ಜನ್ಮಭೂಮಿ | ಹೋರಾಟ, ರಾಜಕಾರಣ, ನ್ಯಾಯಾಲಯ ತೀರ್ಪು...

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಶತಮಾನದ ಹಿನ್ನೆಲೆಯಿದೆ. ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳ ಹಿಂದಿನ ವ್ಯಾಜ್ಯ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ನೇತೃತ್ವದಲ್ಲಿ ನಡೆದಿದ್ದ ರಥಯಾತ್ರೆ, ಬಾಬರಿ ಮಸೀದಿ ಧ್ವಂಸ ಪ್ರಕರಣ, ಇದರ ನಂತರದ ಘಟನಾವಳಿಗಳು... ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವ ಈ ಸಂದರ್ಭದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಈವರೆಗಿನ ಪ್ರಮುಖ ಬೆಳವಣಿಗೆಗಳ ಸುದ್ದಿ, ವಿಶ್ಲೇಷಣೆ, ಲೇಖನಗಳ ಸಂಕಲನ ಇಲ್ಲಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು