ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ರಾಜ್ಯಗಳಲ್ಲಿ ಬಿಎ.2.75 ತಳಿಯ ವೈರಾಣುವಿನ ಹರಡುವಿಕೆ ಅಧಿಕ: ಡಾ.ಈಶ್ವರ್‌ ಗಿಲಾಡ

Last Updated 5 ಜುಲೈ 2022, 13:44 IST
ಅಕ್ಷರ ಗಾತ್ರ

ಮುಂಬೈ: ‘ದೇಶದ ಒಟ್ಟು 10 ರಾಜ್ಯಗಳಲ್ಲಿಬಿಎ.2.75 ತಳಿಯ ವೈರಾಣು ಹೆಚ್ಚಾಗಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 27 ಪ್ರಕರಣಗಳು ಪತ್ತೆಯಾಗಿವೆ’ ಎಂದುಆರ್ಗನೈಸ್ಡ್ ಮೆಡಿಸಿನ್ ಅಕಾಡೆಮಿಕ್ ಗಿಲ್ಡ್‌ನ (ಒಎಂಎಜಿ) ಮಹಾ ಕಾರ್ಯದರ್ಶಿ ಡಾ.ಈಶ್ವರ್‌ ಗಿಲಾಡ ತಿಳಿಸಿದ್ದಾರೆ.

‘ಬಿಎ.2.75 ತಳಿಯ ವೈರಾಣುಓಮೈಕ್ರಾನ್‌ನ ಇತರ ಎರಡು ಉಪ ತಳಿಯ (ಬಿಎ.2.74 ಮತ್ತು ಬಿಎ.2.76) ವೈರಾಣುಗಳಿಗಿಂತಲೂ ಹೆಚ್ಚಾಗಿ ಪಸರಿಸುತ್ತಿದೆ. ಪಶ್ಚಿಮ ಬಂಗಾಳ (13), ಕರ್ನಾಟಕ (10), ಮಧ್ಯಪ್ರದೇಶ (7) ರಾಜ್ಯಗಳಲ್ಲೂ ಅಧಿಕ ಪ್ರಕರಣಗಳು ವರದಿಯಾಗಿವೆ. ನವದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಒಂದು ಇಲ್ಲವೇ ಎರಡು ಪ್ರಕರಣಗಳು ದಾಖಲಾಗಿವೆ’ ಎಂದು ಹೇಳಿದ್ದಾರೆ.

‘ಬಿಎ.2.38 ತಳಿಯ ವೈರಾಣು ಈಗ ಸಾಮಾನ್ಯವಾಗಿದೆ. ಸುಮಾರು ಶೇ 80ರಷ್ಟು ಸೋಂಕಿತರಲ್ಲಿ ಈ ವೈರಾಣು ಕಂಡುಬರುತ್ತಿದೆ. ಬಿಎ.2.75 ತಳಿಯ ವೈರಾಣು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌, ಇಂಗ್ಲೆಂಡ್‌, ಜರ್ಮನಿ, ಅಮೆರಿಕ, ಕೆನಡಾದಲ್ಲೂ ಪತ್ತೆಯಾಗಿದೆ’ ಎಂದಿದ್ದಾರೆ.

‘ಬಿಎ.2.75 ಹರಡುವಿಕೆ ಕಡಿಮೆ’:ಭಾರತದಲ್ಲಿಬಿಎ.2.75 ಉಪ ತಳಿಯ ವೈರಾಣು ವ್ಯಾಪಕವಾಗಿ ಪಸರಿಸುತ್ತಿಲ್ಲ. ಇದು ಅಷ್ಟೇನು ಮಾರಕವಾಗಿಯೂ ಇಲ್ಲ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT