ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿತರ ಒತ್ತುವರಿ ತೆರವುಗೊಳಿಸುವ ಬಾಬಾ ಕಾ ಬುಲ್ಡೋಜರ್‌: ಅಲ್ತಾಫ್ ಠಾಕೂರ್‌

Last Updated 2 ಫೆಬ್ರುವರಿ 2023, 13:59 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ಕಿಸ್ಸಾನ್‌ ತೆಹ್ರಿಕ್‌ ಒತ್ತುವರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರಿ ಭೂಮಿಯಲ್ಲಿ ಪ್ರಭಾವಿಗಳ ಒತ್ತುವರಿಯನ್ನು ‘ಬಾಬಾ ಕಾ ಬುಲ್ಡೋಜರ್‌’ ತೆಗೆದುಹಾಕುತ್ತದೆ. ಬಡವರಿಗೆ ತೊಂದರೆ ನೀಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಅಲ್ತಾಫ್ ಠಾಕೂರ್ ಗುರುವಾರ ಹೇಳಿದ್ದಾರೆ.

ಬಿಜೆಪಿ ವೈಯಕ್ತಿಕ ದ್ವೇಷದಲ್ಲಿ ತೊಡಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಠಾಕೂರ್‌, ‘ಪ್ರಭಾವಿ ಭೂಗಳ್ಳರಾದ ಅಲಿ ಮೊಹಮ್ಮದ್ ಸಾಗರ್ (ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ), ಫಾರೂಕ್ ಅಬ್ದುಲ್ಲಾ (ಮಾಜಿ ಮುಖ್ಯಮಂತ್ರಿ), ಮುಜಾಫರ್ ಶಾ (ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ) ವಿರುದ್ಧ ಬಾಬಾ ಕಾ ಬುಲ್ಡೋಜರ್ ಕೆಲಸ ಮಾಡುತ್ತದೆ. ಸಾಮಾನ್ಯ ಜನರನ್ನು ಮುಟ್ಟುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘30 ವರ್ಷಗಳ ಉಗ್ರಗಾಮಿತ್ವದಲ್ಲಿ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಎನ್‌ಸಿ ಮತ್ತು ಪಿಡಿಪಿಯ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆ, ಹೋಟೆಲ್, ಆಟದ ಮೈದಾನ ನಿರ್ಮಾಣಕ್ಕೆ ಬಳಸಬೇಕಿದ್ದ ಜಮೀನುಗಳನ್ನು ಕಬಳಿಸಿದ್ದಾರೆ' ಎಂದು ಆರೋಪಿಸಿದರು.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ವಿರುದ್ಧ ವಾಗ್ದಾಳಿ ನಡೆಸಿದ ಠಾಕೂರ್‌, ‘ಅವರು ಯಾವಾಗಲೂ ಸೇನೆ ಮತ್ತು ಪೊಲೀಸರ ವಿರುದ್ಧ ಮಾತನಾಡುತ್ತಾರೆ. ಏಕೆಂದರೆ ಅವರು ಚೀನಾದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಇದು ದೇಶ ವಿರೋಧಿ ನಡೆಯಾಗಿದೆ‘ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎರಡನೇ ಅವಧಿಯಲ್ಲಿ ಅಪರಾಧಿಗಳು ಮತ್ತು ಗಲಭೆಗಳಲ್ಲಿ ಭಾಗಿಯಾಗಿರುವ ಜನರ ಆಸ್ತಿಗಳನ್ನು ನೆಲಸಮ ಮಾಡುತ್ತಿರುವುದರಿಂದ ಅವರಿಗೆ ‘ಬಾಬಾ ಬುಲ್ಡೋಜರ್’ ಎಂದು ಕರೆಯಲಾಗುತ್ತಿದೆ. ಈಗ ದೇಶಾದ್ಯಂತ ಅತಿಕ್ರಮಣಗಳ ವಿರುದ್ಧ ತೆಗೆದುಕೊಳ್ಳುವ ಕ್ರಮಗಳಿಗೆ ‘ಬಾಬಾ ಕಾ ಬುಲ್ಡೋಜರ್‌’ ಎಂಬ ಪದವನ್ನು ಬಿಜಿಪಿ ನಾಯಕರು ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT