ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗಲು ವಧು ಹುಡುಕಿ ಕೊಡಿ: ಮೆರವಣಿಗೆ ನಡೆಸಿ ಸರ್ಕಾರಕ್ಕೆ ಯುವಕರ ಮನವಿ

ಅವಿವಾಹಿತರಿಗೆ ಹೆಣ್ಣು ಸಿಗದಿರಲು ಸರ್ಕಾರವೇ ಕಾರಣ ಎಂದು ದೂರಿದ ‘ಬ್ಯಾಚುಲರ್ಸ್‌‘
Last Updated 22 ಡಿಸೆಂಬರ್ 2022, 7:47 IST
ಅಕ್ಷರ ಗಾತ್ರ

ಸೋಲಾಪುರ: ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲವೆಂದು ‘ವರರ ಸಂಘ‘ವೊಂದು ಮೆರವಣಿಗೆ ನಡೆಸಿ, ಮದುವೆಯಾಗಲು ವಧುವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದ ಸೋಲಾಪುರದಿಂದ ವರದಿಯಾಗಿದೆ.

‘ವಧು–ವರರ ಮೋರ್ಚಾ‘ ಎನ್ನುವ ಸಂಘಟನೆಯ ಸದಸ್ಯರು ಬುಧವಾರ ವಿಶೇಷ ದಿರಿಸು ಧರಿಸಿ ಮೆರವಣಿಗೆ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿ ಗಂಡು –ಹೆಣ್ಣು ಅನುಪಾತ ಹೆಚ್ಚಿಸಲು ಪ್ರಸವಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೇ ಈ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ವಿವಾಹವಾಗಲು ವಧುವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದರು.

ನೂರಾರು ಅವಿವಾಹಿತರು ಮದುವೆ ದಿರಿಸು ಧರಿಸಿ ಬಂದಿದ್ದರು. ಇನ್ನು ಕೆಲವರು ಮದುಮಗನ ಹಾಗೆ ಕುದುರೆ ಏರಿ ಆಗಮಿಸಿದ್ದರು. ವಾದ್ಯ ತಂಡದೊಂದಿಗೆ ಮೆರವಣಿಗೆ ಬಂದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಜನರು ಈ ಮೆರವಣಿಗೆಯನ್ನು ತಮಾಷೆ ಮಾಡಬಹುದು. ಆದರೆ ಗಂಡು–ಹೆಣ್ಣು ಅನುಪಾತದಲ್ಲಿ ಇಳಿಕೆಯಾಗಿರುವುದರಿಂದ ವಿವಾಹವಾಗಬಯಸುವ ಗಂಡು ಮಕ್ಕಳಿಗೆ ವಧು ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಗಂಡು–ಹೆಣ್ಣು ಅನುಪಾತ 1000:889 ಇದೆ. ಸರ್ಕಾರವೇ ಇದಕ್ಕೆ ಜವಾಬ್ದಾರಿ‘ ಎಂದು ಈ ಮೆರವಣಿಗೆಯನ್ನು ಆಯೋಜಿಸಿದ ಜ್ಯೋತಿ ಕ್ರಾಂತಿ ಪರಿಷತ್‌ನ ಸಂಸ್ಥಾಪಕ ರಮೇಶ್‌ ಬರಾಸ್ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT