ಶುಕ್ರವಾರ, ಡಿಸೆಂಬರ್ 9, 2022
22 °C

ಶಿಂದೆ ಬಣ ಸೇರಿದ ಬಾಳಾ ಠಾಕ್ರೆ ನಂಬಿಕಸ್ಥರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಠಾಣೆ: ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಮನೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಚಂಪಾ ಸಿಂಗ್‌ ಥಾಪಾ ಹಾಗೂ ಮೋರೇಶ್ವರ್‌ ರಾಜೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ನೇತೃತ್ವದ ಬಣವನ್ನು ಸೋಮವಾರ ಸೇರಿಕೊಂಡರು.

ಥಾಪಾ ಅವರು ಬಾಳಾ ಠಾಕ್ರೆ ಅವರ ನಂಬಿಕಸ್ಥ ವ್ಯಕ್ತಿಯಾಗಿದ್ದರು. 27 ವರ್ಷಗಳ ಕಾಲ ಬಾಳ ಠಾಕ್ರೆ ಅವರ ಸೇವೆ ಮಾಡಿದ್ದರು. ರಾಜೆ ಅವರು 35 ವರ್ಷಗಳಿಂದ ಠಾಕ್ರೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಳಾ ಠಾಕ್ರೆ ಅವರ ಕರೆಗಳನ್ನು ರಾಜೆ ಅವರೇ ಸ್ವೀಕರಿಸುತ್ತಿದ್ದರು.

‘ಬಾಳ ಠಾಕ್ರೆ ಅವರ ಹಿಂದುತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿರುವ ‘ನೈಜ’ ಶಿವಸೇನಾವನ್ನು ಪ್ರತಿನಿಧಿಸುವ ಬಣವನ್ನು ಈ ಇಬ್ಬರೂ ಸೇರಿಕೊಂಡಿದ್ದಾರೆ. ಇಬ್ಬರ ಆಗಮನವು ನವರಾತ್ರಿಯ ಹಬ್ಬಕ್ಕೆ ಚೈತನ್ಯ ತಂದುಕೊಟ್ಟಿದೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಪ್ರತಿಕ್ರಿಯಿಸಿದರು. ಈ ಇಬ್ಬರನ್ನೂ ಶಿಂದೆ ಅವರು ಶಾಲು ಹೊದಿಸಿ ತಮ್ಮ ಬಣಕ್ಕೆ ಬರಮಾಡಿಕೊಂಡರು.

ಪಾಲ್ಗರ್‌ ಜಿಲ್ಲಾ ಪರಿಷತ್‌ ಅಧ್ಯಕ್ಷ ವೈದೇಹಿ ವಾದನ್‌ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳ ಸದಸ್ಯರು ಸೋಮವಾರ ಶಿಂದೆ ಅವರ ಬಣವನ್ನು ಸೇರಿದರು. ಐವರು ಶಾಸಕರು ಮತ್ತು ಸಂಸದರು ಶಿಂದೆ ಅವರ ಬಣವನ್ನು ಸೇರಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು