ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಕದ್ದ ಬಾಲಾಜಿ ವಿಗ್ರಹ ತಮಿಳುನಾಡಿನಲ್ಲಿ ವಶ

Last Updated 9 ನವೆಂಬರ್ 2022, 20:07 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ದೇವಾಲಯದಿಂದ ಕಳವು ಮಾಡಿದ್ದ ಬಾಲಾಜಿ ವಿಗ್ರಹವನ್ನು ತಮಿಳುನಾಡಿನಗೋಬಿಚೆಟ್ಟಿಪಾಳ್ಯಂನ ಮನೆಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ವಿಗ್ರಹ ವಿಭಾಗದ ಸಿಐಡಿ ಬುಧವಾರ ತಿಳಿಸಿದೆ.

ಕೇಂದ್ರ ವಲಯದ ಹೆಚ್ಚುವರಿ ಡಿಎಸ್‌ಪಿ ಬಾಲಮುರುಗನ್ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್‌ ಎಲಾಂಗೊ ನೇತೃತ್ವದಲ್ಲಿ ಅಧಿಕಾರಿಗಳು ವಿಗ್ರಹ (22.8 ಕೆ.ಜಿ ತೂಕ, 58 ಸೆಂ.ಮೀ ಎತ್ತರ) ವಶಪಡಿಸಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಮಂಡ್ಯದ ದೇವಾಲಯದಿಂದ ವಿಗ್ರಹವನ್ನು ದೇವಸ್ಥಾನದ ಪೂಜಾರಿ ಕಳವು ಮಾಡಿ ಗೋಬಿಚೆಟ್ಟಿಪಾಳ್ಯದ ವಕೀಲರಿಗೆ ಮಾರಾಟ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇನ್‌ಸ್ಪೆಕ್ಟರ್‌ಗಳಾದ ಪಾಂಡಿಯರಾಜನ್ ಮತ್ತು ರಾಜೇಶ್ ಅವರು ಶ್ರೀಮಂತ ವಿಗ್ರಹ ಕಳ್ಳಸಾಗಣೆದಾರರಂತೆ ವೇಷ ಧರಿಸಿಕೊಂಡು ವಿಗ್ರಹ ಹುಡುಕಲು ಪ್ರಾರಂಭಿಸಿದರು. ನ.4 ರಂದು ಅವಿನಾಶಿ ರಸ್ತೆಯ ಕಾಫಿ ಶಾಪ್ ನಲ್ಲಿ ಮಧ್ಯವರ್ತಿಯ ಮೂಲಕ ವಕೀಲರ ಮನೆಗೆ ತೆರಳಿ, ಖರೀದಿಸುವ ನೆಪದಲ್ಲಿ ವಿಗ್ರಹ ವಶಪಡಿಸಿಕೊಂಡು, ವಕೀಲನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT