ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ: ಆರೋಗ್ಯ ಸಚಿವ ಹರ್ಷವರ್ಧನ್ 

Last Updated 15 ಸೆಪ್ಟೆಂಬರ್ 2020, 10:27 IST
ಅಕ್ಷರ ಗಾತ್ರ

ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಕೊರೊನಾ ವೈರಸ್ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ರೋಗ ಹರಡುವುದನ್ನು ತಡೆಯಲು ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹತ್ತು ಲಕ್ಷಕ್ಕೆ 3,320 ಮತ್ತು ಸಾವಿನ ಪ್ರಮಾಣ 55 ಆಗಿದೆ. ಇದು ಜಗತ್ತಿನಲ್ಲೇ ಅತೀ ಕಡಿಮೆ ಎಂದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಅಂದಾಜು 14 ಲಕ್ಷದಿಂದ 29 ಲಕ್ಷದವರೆಗೆ ಸೋಂಕು ಪ್ರಕರಣಗಳನ್ನು ಮತ್ತು 37,000-78,000 ಸಾವು ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ಈ ನಾಲ್ಕು ತಿಂಗಳುಗಳನ್ನು ಆರೋಗ್ಯವಲಯದಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲು, ಮಾನವ ಸಂಪನ್ಮೂಲ ಹೆಚ್ಚಿಸಲುಮತ್ತು ಪಿಪಿಇ ಕಿಟ್, ಎನ್‍95 ಮಾಸ್ಕ್, ವೆಂಟಿಲೇಟರ್‌ಗಳನ್ನು ಭಾರತದಲ್ಲೇ ನಿರ್ಮಿಸಲು ಸದುಪಯೋಗ ಪಡಿಸಿಕೊಂಡೆವು ಎಂದು ಹರ್ಷವರ್ಧನ್ಹೇಳಿದ್ದಾರೆ.

ಪ್ರತಿದಿನ ಹತ್ತು ಲಕ್ಷ ಕೋವಿಡ್ ಪರೀಕ್ಷೆ ನಡೆಯುತ್ತದೆ. ಅಂದರೆ ಪ್ರತಿದಿನ ಹತ್ತು ಲಕ್ಷ ಜನರಲ್ಲಿ 720 ಪರೀಕ್ಷೆ ನಡೆಸಿದಂತಾಗುತ್ತದೆ.ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೆ 140 ಪರೀಕ್ಷೆ ಎಂದು ನಿಗದಿಪಡಿಸಿದ್ದು ಅದಕ್ಕಿಂತ ಇದು ಹೆಚ್ಚಾಗಿದೆ.ಸೆಪ್ಟೆಂಬರ್ 11ರವರೆಗೆ ಒಟ್ಟು 5,51,89,226 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ಪ್ರಕರಣಗಳ ಸಂಖ್ಯೆ 50 ಲಕ್ಷದತ್ತ ಸಾಗುತ್ತಿದ್ದು, ಪ್ರತಿದಿನ ಪ್ರಕರಣಗಳ ಸಂಖ್ಯೆ 90,000ಕ್ಕಿಂತ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT