ಸೋಮವಾರ, ನವೆಂಬರ್ 30, 2020
20 °C

ಚಟರ್ಜಿ ನಿಧನಕ್ಕೆ ಗಂಗೂಲಿ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಖ್ಯಾತ ನಟ ಸೌಮಿತ್ರ ಚಟರ್ಜಿ (85) ನಿಧನಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಸಂತಾಪ ಸೂಚಿಸಿದ್ದಾರೆ.

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಂಗಾಳಿ ನಟ ಚಟರ್ಜಿಯವರಿಗೆ ಇತ್ತೀಚೆಗೆ ಕೋವಿಡ್–19 ದೃಢಪಟ್ಟಿತ್ತು. ಹೀಗಾಗಿ ಅವರು ಇಂದು ಮಧ್ಯಾಹ್ನ 12.15ಕ್ಕೆ ಇಲ್ಲಿನ ಬಿಲೆ ವ್ಯೂವ್‌ ಕ್ಲಿನಿಕ್‌ನಲ್ಲಿ ನಿಧನರಾದರು.

ಈ ಸಂಬಂಧ ಟ್ವೀಟ್ ಮಾಡಿರುವ ಗಂಗೂಲಿ ಅವರು, ‘ನೀವು ಸಾಕಷ್ಟು ಸಾಧಿಸಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

‘ಸೌಮಿತ್ರ ಚಟರ್ಜಿಯವರು ಇಂದು (ನವೆಂಬರ್ 15) ಮಧ್ಯಾಹ್ನ 12.15ಕ್ಕೆ ಬಿಲೆ ವ್ಯೂವ್‌ ಕ್ಲಿನಿಕ್‌ನಲ್ಲಿ ಕೊನೆಯುಸಿರೆಳೆದರು ಎಂದು ನಾವು ಭಾರವಾದ ಹೃದಯದಿಂದ ಘೋಷಿಸುತ್ತೇವೆ’ ಎಂದು ಆಸ್ಪತ್ರೆಯ ಪ್ರಕಟಣೆ ಹೊರಡಿಸಿತ್ತು.

ಚಟರ್ಜಿಯವರನ್ನು ‘ಪದ್ಮಭೂಷಣ’ (2004), ‘ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ’ (2018) ಸೇರಿದಂತೆ ಸಾಕಷ್ಟು ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು