ಬುಧವಾರ, ಆಗಸ್ಟ್ 10, 2022
23 °C

ಪಶ್ಚಿಮ ಬಂಗಾಳ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ: ನಡ್ಡಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‍ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಸರ್ಕಾರವು  ಹಿಂದೂ ವಿರೋಧಿ ಧೋರಣೆಯನ್ನು ಹೊಂದಿದ್ದು, ಅಲ್ಪ ಸಂಖ್ಯಾತರನ್ನು ಸೆಳೆಯುವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಆಡಳಿತ ಪಕ್ಷವು ರಾಜ್ಯದಲ್ಲಿ ಭ್ರಷ್ಟಚಾರವನ್ನು ಬೆಳೆಸುತ್ತಿದೆ. ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ತಲೆಎತ್ತಿರುವ ಟಿಎಂಸಿ ಬೆಂಬಲಿತ ಭೂ ಮಾಫಿಯಾ ಚಟುವಟಿಕೆಯಿಂದಾಗಿ ರವೀಂದ್ರನಾಥ್‌ ಠಾಕೂರ್‌ ಅವರ ಹೆಸರಿಗೆ ಕಳಂಕ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಯ ರಾಜ್ಯ ಸಮಿತಿಯನ್ನು ಹೊಸದಾಗಿ ರಚಿಸಲಾದ ಸಂದರ್ಭದಲ್ಲಿ ಅವರು ಅಂತರ್ಜಾಲ ವೇದಿಕೆ ಮೂಲಕ  ಮಾತನಾಡಿದರು. 

ಇಡಿ ದೇಶವೇ ಆ.5 ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯನ್ನು ವೀಕ್ಷಿಸುತ್ತಿದ್ದಾಗ, ಪಶ್ಚಿಮ ಬಂಗಾಳದ ಜನರು ಈ ಕಾರ್ಯಕ್ರಮದ ಭಾಗವಾಗದಂತೆ ತಡೆಯಲು ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿದರು. ಆದರೆ ಬಕ್ರಿದ್‌ ಸಂದರ್ಭದಲ್ಲಿ ಲಾಕ್‌ಡೌನ್‌ ಅನ್ನು ವಾಪಸು ಪಡೆಯಲಾಯಿತು ಎಂದು ನಡ್ಡಾ ಅವರು ಹೇಳಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು