ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಗೇಮಿಂಗ್‌ಗೆ ಕರಡು ನಿಯಮ: ರಾಜೀವ್ ಚಂದ್ರಶೇಖರ್‌

Last Updated 2 ಜನವರಿ 2023, 23:15 IST
ಅಕ್ಷರ ಗಾತ್ರ

ನವದೆಹಲಿ: ‘ಆಟಗಳ ಫಲಿತಾಂಶದ ಮೇಲೆ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು ಬೆಟ್ಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂಬ ಕರಡು ನಿಯಮ ರೂಪಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್‌ ಸೋಮವಾರ ಹೇಳಿದರು.

‘ಆನ್‌ಲೈನ್‌ ಗೇಮಿಂಗ್‌ ನಿಯಮಗಳ ಕುರಿತು ಇರುವ ಸ್ವಯಂ ನಿಯಂತ್ರಕ ಸಂಸ್ಥೆಯಲ್ಲಿ ಎಲ್ಲ ಆನ್‌ಲೈನ್‌ ಗೇಮಿಂಗ್‌ ಕಂಪೆನಿಗಳು ನೋಂದಾಯಿಸಿಕೊಳ್ಳಬೇಕು’ ಎಂದು ಹೇಳಿದರು.

‘ಕರಡು ನಿಯಮಗಳ ಕುರಿತು ಕಂಪನಿಗಳು ಪ್ರತಿಕ್ರಿಯಿ
ಸಲು ಜನವರಿ 17ರವರೆಗೆ ಗಡುವು ನೀಡಲಾಗಿದೆ. ಫೆಬ್ರುವರಿ ಹೊತ್ತಿಗೆ ಈ ಎಲ್ಲಾ ನಿಯಮಗಳು ಸಿದ್ಧವಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT