ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಅಮರಿಕ ಬಾಂಧವ್ಯಕ್ಕೆ ಬೈಡನ್ ಆದ್ಯತೆ

ಒಬಾಮ ಆಡಳಿತದಲ್ಲಿದ್ದ ಹಿರಿಯ ಅಧಿಕಾರಿ ಆಶಯ
Last Updated 12 ನವೆಂಬರ್ 2020, 8:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಬಹಳ ಹಿಂದಿನಿಂದಲೂ ಭಾರತ – ಅಮೆರಿಕ ಬಾಂಧವ್ಯವನ್ನು ಬೆಂಬಲಿಸುತ್ತಿದ್ದು, ತಮ್ಮ ಆಡಳಿತದಲ್ಲೂ ಆ ಸಂಬಂಧವನ್ನು ಮುಂದುವರಿಸುವ ಜತೆಗೆ, ಉಭಯ ದೇಶಗಳ ನಡುವೆ ರಕ್ಷಣೆ ಮತ್ತು ಭದ್ರತಾ ಸಹಭಾಗಿತ್ವಕ್ಕೆ ಆದ್ಯತೆ ನೀಡಬಹುದು‘ ಎಂದು ಬರಾಕ್ ಒಬಾಮ ಆಡಳಿತದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಿಯೋಜಿತ ಅಧ್ಯಕ್ಷ ಬೈಡನ್ – ಉಪಾಧ್ಯಕ್ಷೆ ಕಮಲಾ ಆಡಳಿತದಲ್ಲಿ ಭಾರತ – ಅಮೆರಿಕ ಬಾಂಧವ್ಯದಲ್ಲಿ ರಕ್ಷಣೆ ಮತ್ತು ಭದ್ರತಾ ಸಂಬಂಧಕ್ಕೆ ಹೆಚ್ಚು ಆದ್ಯತೆ ಸಿಗಲಿದೆ. ಟ್ರಂಪ್ ಆಡಳಿತದಲ್ಲೂಈ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗಳಾಗಿದ್ದವು‘ ಅಲ್ಯಸ್ಸಾ ಐರೆಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಮಾಧ್ಯಮಗಳು ಬೈಡನ್ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಬೈಡನ್ ವಿಜೇತರಾಗಿದ್ದಾರೆ ಎಂದು ಪ್ರಕಟಿಸಿವೆ. ಆದರೆ ಟ್ರಂಪ್ ಇನ್ನೂ ಸೋಲು ಒಪ್ಪಿಕೊಂಡಿಲ್ಲ. ಜತೆಗೆ, ಚುನಾವಣೆ ನಡೆದ ಪ್ರಮುಖ ರಾಜ್ಯಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತ – ಅಮೆರಿಕ ಸಂಬಂಧ ಬೈಡನ್ ಆಡಳಿತದಲ್ಲಿ ಹೇಗೆ ರೂಪುಗಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT