ಶುಕ್ರವಾರ, ಮೇ 20, 2022
23 °C

ಬಿಹಾರ ಸಂಪುಟ ವಿಸ್ತರಣೆ: ಶಹನವಾಜ್‌ ಹುಸೇನ್‌ ಅಚ್ಚರಿಯ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮಂಗಳವಾರ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಸೈಯದ್ ಶಹನವಾಜ್ ಹುಸೇನ್ ಸೇರಿದಂತೆ 17 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರರೂ ಆದ ಹುಸೇನ್‌ ಅವರು ಕಳೆದ ತಿಂಗಳು ಬಿಹಾರದ ವಿಧಾನ ಪರಿಷತ್ತಿಗೆ ಅಚ್ಚರಿಯ ರೀತಿಯಲ್ಲಿ ಆಯ್ಕೆ ಆಗಿದ್ದರು. ಸಚಿವರ ಪೈಕಿ ಮೊದಲಿಗರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮುಖ ಖಾತೆಯನ್ನೇ ಪಡೆಯುವ ಸೂಚನೆ ಲಭಿಸಿದೆ.

ಬಿಜೆಪಿಯ ಕೋಟಾದಡಿ ಮಂಗಳವಾರ ಒಂಬತ್ತು ಮಂದಿ ಸಂಪುಟ ಸೇರಿದ್ದಾರೆ. ಇದರಿಂದ ಸಂಪುಟದಲ್ಲಿ ಬಿಜೆಪಿ ಬಲ 20ಕ್ಕೆ ಏರಿದೆ. ಜೆಡಿಯು ಕೋಟಾದಲ್ಲಿ ಎಂಟು ಮಂದಿ ಸಂಪುಟ ಸೇರಿದ್ದಾರೆ. ಈ ಮೂಲಕ ಸಂಪುಟದಲ್ಲಿ ಜೆಡಿಯು ಬಲ 12ಕ್ಕೆ ಏರಿದೆ.

ಮಾನದಂಡಗಳ ಪ್ರಕಾರ, ಮುಖ್ಯಮಂತ್ರಿ ಸೇರಿ 36 ಸದಸ್ಯರು ಸಂಪುಟದಲ್ಲಿ ಇರಬಹುದು. ಕಳೆದ ನವೆಂಬರ್‌ನಲ್ಲಿ ಸಂಪುಟ ರಚನೆಯಾದ ವೇಳೆ, ಮಿತ್ರ ಪಕ್ಷಗಳಾದ ವಿಐಪಿ ಮತ್ತು ಎಚ್‌ಎಎಂ ಪಕ್ಷಗಳ ತಲಾ ಒಬ್ಬರು ಸದಸ್ಯರನ್ನು ಸೇರಿಸಿಕೊಳ್ಳಲಾಗಿತ್ತು. ಮಂಗಳವಾರ ಸಂಪುಟ ವಿಸ್ತರಣೆಯಿಂದ ಸಂಪುಟದ ಬಲ 34ಕ್ಕೆ ಏರಿದಂತಾಗಿದೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಇದನ್ನೂ ಓದಿ...ಭಾರತ ಭೂಲೋಕದ ಸ್ವರ್ಗ, ಭಾರತೀಯ ಮುಸ್ಲಿಮನಾಗಿರಲು ಹೆಮ್ಮೆಯಿದೆ: ಗುಲಾಂ ನಬಿ ಆಜಾದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು