ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಜನ ಸಮಾಜ ಪಕ್ಷದ ಬಿಹಾರ ರಾಜ್ಯಾಧ್ಯಕ್ಷ ಆರ್‌ಜೆಡಿ ಸೇರ್ಪಡೆ

Last Updated 3 ಅಕ್ಟೋಬರ್ 2020, 10:57 IST
ಅಕ್ಷರ ಗಾತ್ರ

ಪಟ್ನಾ: ಬಹುಜನ ಸಮಾಜ ಪಕ್ಷದ ಬಿಹಾರ ರಾಜ್ಯಾಧ್ಯಕ್ಷ ಭಾರತ್ ಬಿಂದ್ ಅವರು ಆರ್‌ಜೆಡಿಗೆ ಸೇರ್ಪಡೆಗೊಂಡಿದ್ದಾರೆ.

ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲೇ ಭಾರತ್ ಬಿಂದ್ ಅವರು ಪಕ್ಷ ತೊರೆದಿರುವುದರಿಂದ ಬಿಎಸ್‌ಪಿಗೆ ತೀವ್ರ ಹಿನ್ನೆಡೆಯಾಗಿದೆ.

ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಅವರು ಭಾರತ್‌ ಬಿಂದ್‌ ಅವರಿಗೆ ಪಕ್ಷದ ಸದಸ್ಯತ್ವ ನೀಡಿದ್ದಾರೆ. ಭಾರತ್ ಬಿಂದ್ ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಚಿತ್ರವನ್ನು ತೇಜಶ್ವಿ ಯಾದವ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಬಹುಜನ ಸಮಾಜ ಪಕ್ಷದ ಬಿಹಾರ ಘಟಕದ ಅಧ್ಯಕ್ಷರು ಹೊಸ ಬಿಹಾರವನ್ನು ನಿರ್ಮಿಸಲು ಮತ್ತು ಯುವಜನ ವಿರೋಧಿ ಎನ್‌ಡಿಎಯನ್ನು ತೆಗೆದುಹಾಕಲು ನಮ್ಮ ಜೊತೆ ಸೇರಿಕೊಂಡಿದ್ದಾರೆ' ಎಂದು ತೇಜಶ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT