ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಮೇಲೆ ಹಲ್ಲೆ: ನಕಲಿ ವಿಡಿಯೊ ಹಂಚಿಕೊಳ್ಳುತ್ತಿದ್ದ ಯುಟ್ಯೂಬರ್‌ ಬಂಧನ

Last Updated 18 ಮಾರ್ಚ್ 2023, 11:39 IST
ಅಕ್ಷರ ಗಾತ್ರ

ಪಟ್ನಾ: ತಮಿಳುನಾಡಿನಲ್ಲಿ ಬಿಹಾರ ವಲಸೆ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಲಾಗಿದೆ ಎಂದು ನಕಲಿ ವಿಡಿಯೊಗಳನ್ನು ಹಂಚಿಕೊಂಡಿದ್ದ ಯುಟ್ಯೂಬರ್‌ ಮನೀಶ್ ಕಶ್ಯಪ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಚಂಪಾರಣ್‌ ಜಿಲ್ಲೆಯ ಜಗದೀಶಪುರ ಪೊಲೀಸ್‌ ಠಾಣೆಯ ಪೊಲೀಸರು ಶನಿವಾರ ಮನೀಶ್ ಕಶ್ಯಪ್‌ನನ್ನು ಬಂಧಿಸಿದ್ದಾರೆ.

ಕಶ್ಯಪ್‌ ಮೇಲೆ ಬಿಹಾರ ಮತ್ತು ತಮಿಳುನಾಡು ಪೊಲೀಸರು ಹಲವಾರ ಪ್ರಕರಣಗಳನ್ನು ದಾಖಲಿಸಿದ್ದಾರೆ. ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಇಬ್ಬರನ್ನು ಬಂಧಿಸಿದ್ದರು. ಕಶ್ಯಪ್‌ ಬಂಧನ ಮೂರನೇಯದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನಲ್ಲಿ ಬಿಹಾರ ಕಾರ್ಮಿಕರನ್ನು ಥಳಿಸುತ್ತಿರುವ, ಹಲ್ಲೆ ಮಾಡುತ್ತಿರುವ ನಕಲಿ ವಿಡಿಯೊಗಳನ್ನು ಕಶ್ಯಪ್‌ ಹಂಚಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಶ್ಯಪ್‌ ಬಂಧನವಾಗಿದೆ. ಅವರ ಮೇಲೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ದೂರನ್ನು ದಾಖಲಿಸಲಾಗಿದೆ.

ಕಶ್ಯಪ್‌ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಇವನ ಬಂಧನಕ್ಕಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ಈ ವಿಷಯ ತಿಳಿದು ಕಶ್ಯಪ್‌ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT