ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19| ಕಾರ್ಬೆವ್ಯಾಕ್ಸ್‌ ಲಸಿಕೆ ಬೆಲೆ ₹840ರಿಂದ ₹250ಕ್ಕೆ ಇಳಿಕೆ

Last Updated 16 ಮೇ 2022, 10:46 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ 19 ವಿರುದ್ಧ 5 ರಿಂದ 12 ವರ್ಷದ ಮಕ್ಕಳಿಗೆ ನೀಡಲಾಗುತ್ತಿರುವ ಕಾರ್ಬೆವಾಕ್ಸ್‌ನ ದರವನ್ನು ₹840ರಿಂದ ₹250ಗೆ ಇಳಿಸಲಾಗಿದೆ. ಖಾಸಗಿ ಕೇಂದ್ರಗಳಿಗೆ ಹೊಸ ದರದಲ್ಲಿ ಪೂರೈಕೆ ಮಾಡಲಾಗುತ್ತದೆ ಎಂದು ಔಷಧ ತಯಾರಕ ಸಂಸ್ಥೆ ‘ಬಯೋಲಾಜಿಕಲ್ ಇ. ಲಿಮಿಟೆಡ್ (ಬಿಇ)’ ಸೋಮವಾರ ‌ಹೇಳಿದೆ.

ಪೂರೈಕೆ ದರ ₹250ಕ್ಕೆ ಇಳಿದರೂ, ಖಾಸಗಿ ಕೇಂದ್ರಗಳಲ್ಲಿ ಒಂದು ಡೋಸ್‌ ಲಸಿಕೆ ₹400ಕ್ಕೆ ಲಭ್ಯವಾಗಲಿದೆ. ಇದರಲ್ಲಿ ತೆರಿಗೆಗಳು ಮತ್ತು ಇನ್ನಿತರೆ ಶುಲ್ಕಗಳು ಸೇರಿರಲಿವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ, ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆಯು ತೆರಿಗೆ, ಶುಲ್ಕ ಸೇರಿ ₹990ಕ್ಕೆ ಸಿಗುತ್ತಿತ್ತು.

ಈ ವರ್ಷ ಮಾರ್ಚ್‌ನಲ್ಲಿ ಕೋವಿಡ್-19 ವಿರುದ್ಧ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾದಾಗ ಕಾರ್ಬೆವಾಕ್ಸ್ ಲಸಿಕೆಯನ್ನು ಬಳಸಲಾಯಿತು. ಸರ್ಕಾರದ ಲಸಿಕೆ ಕಾರ್ಯಕ್ರಮಕ್ಕಾಗಿ ಅದರ ಬೆಲೆಯನ್ನು ₹145ಕ್ಕೆ ನಿಗದಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT