ಭಾನುವಾರ, ಸೆಪ್ಟೆಂಬರ್ 26, 2021
23 °C

43 ಸ್ಥಾನ ಗೆದ್ದರೂ ನಿತೀಶ್ ಅವರನ್ನು ಸಿಎಂ ಮಾಡಿದೆವು: ಬಿಹಾರ ಬಿಜೆಪಿ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಂಗಾಬಾದ್: ‘43 ಸ್ಥಾನವಿದ್ದರೂ ನಾವು ನಿತೀಶ್‌ ಅವರನ್ನು ಸಿಎಂ ಅಗಿ ಒಪ್ಪಿಕೊಂಡಿದ್ದೇವೆ. ನಮ್ಮದು ಸ್ವತಂತ್ರ ಸರ್ಕಾರವಲ್ಲ. ನಾವು ಸಹಿಸಿಕೊಂಡು ಹೋಗಬೇಕಿದೆ’ ಎಂದು ಬಿಹಾರದ ಸಚಿವ, ಬಿಜೆಪಿ ಸಾಮ್ರಾಟ್‌ ಚೌಧರಿ ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಿರುವ ಅವರು, ‘ಬಿಹಾರದಲ್ಲಿ ನಮ್ಮದು ಸಮ್ಮಿಶ್ರ ಸರ್ಕಾರ. ಇದು ಸ್ವತಂತ್ರ ಸರ್ಕಾರವಲ್ಲ. 4 ಸಿದ್ಧಾಂತಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ನಮಗೆ ಬಿಹಾರದಲ್ಲಿ ಕೆಲಸ ಮಾಡುವುದು ತುಂಬಾ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಅನೇಕ ವಿಷಯಗಳನ್ನು ಸಹಿಸಿಕೊಳ್ಳಬೇಕಿದೆ,’ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. 

‘ನಮಗೆ 74 ಸ್ಥಾನ ಸಿಕ್ಕರೂ, 43 ಸ್ಥಾನ ಪಡೆದ ನಿತೀಶ್‌ ಅವರನ್ನು ಸಿಎಂ ಆಗಿ ಒಪ್ಪಿಕೊಂಡೆವು. ಇದು ಹೊಸದಲ್ಲ. 2000ರಲ್ಲಿ ಜೆಡಿಯು 37 ಸ್ಥಾನಗಳನ್ನು ಗೆದ್ದಾಗಲೂ ಅವರನ್ನು ಸಿಎಂ ಆಗಿ ಸ್ವೀಕರಿಸಲಾಯಿತು. ಆಗ ಬಿಜೆಪಿ 68-69 ಸ್ಥಾನ ಗೆದ್ದಿತ್ತು’ ಎಂದು ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು