ಮಂಗಳವಾರ, ನವೆಂಬರ್ 29, 2022
21 °C

ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳ ಮಾಲೀಕನಂತೆ ವರ್ತಿಸುತ್ತಿದೆ: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದವರು (ಎನ್‌ಸಿಬಿ) ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ವಶಪಡಿಸಿಕೊಂಡ ಪ್ರಕರಣದ ರಾಜಕೀಯ ಕೆಸರೆರಚಾಟದ ನಡುವೆ, ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳ ಮಾಲೀಕನಂತೆ ವರ್ತಿಸುತ್ತಿದೆ ಎಂದು ಶಿವಸೇನಾ ಮಂಗಳವಾರ ಆರೋಪಿಸಿದೆ.

ಹಾಗಾದರೆ, ಪ್ರಜಾಪ್ರಭುತ್ವದಲ್ಲಿ ಮಾಲೀಕರು ಬದಲಾಗುತ್ತಿರುತ್ತಾರೆ, ಇದಕ್ಕೆ ಸಾಕ್ಷ್ಯಗಳೂ ಇವೆ ಎಂಬುದನ್ನು ಮರೆಯಬಾರದು ಎಂದು ಅದು ಎಚ್ಚರಿಸಿದೆ.

ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಆರೋಪಿಯಾಗಿರುವ ಡ್ರಗ್ಸ್‌ ಪ್ರಕರಣದಲ್ಲಿ ₹ 25 ಕೋಟಿ ಬೇಡಿಕೆಯ ಆರೋಪಗಳು ಎದುರಾಗಿವೆ. ಇದಿನ್ನೂ ಆರಂಭ, ಮುಂದೆ ಏನೇನು ಇದೆಯೋ ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.

‘ಮಾಲೀಕರು ಮತ್ತು ಅವರ ಉದ್ಯೋಗಿಗಳು ಮುಂದಾಗುವ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಅದು ಹೇಳಿದೆ.

ಪ್ರಶ್ನೆಯು ನಟ ಶಾರುಕ್‌ ಖಾನ್ ಅಥವಾ ಅವರ ಮಗನ ಬಗ್ಗೆ ಅಲ್ಲ ಎಂದಿರುವ ಶಿವಸೇನಾ, ಇದು ಕೇಂದ್ರ ತನಿಖಾ ಸಂಸ್ಥೆಗಳ ಪಾತ್ರ ಮತ್ತು ಪ್ರಾಮಾಣಿಕತೆಯ ಬಗೆಗಿನ ಪ್ರಶ್ನೆಯಾಗಿದೆ ಎಂದಿದೆ.

ಆರ್ಯನ್‌ ಖಾನ್‌ ಅವರನ್ನು ಕೆಲವು ಗ್ರಾಂ ಡ್ರಗ್ಸ್‌ ಪತ್ತೆ ಪ್ರಕರಣದಿಂದ ಕೈಬಿಡಲು ₹25 ಕೋಟಿ ಬೇಡಿಕೆಯೊಡ್ಡಿರುವುದಕ್ಕೆ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಗುಜರಾತ್‌ನ ಅದಾನಿ ಸಮೂಹ ನಿಯಂತ್ರಿತ ಮುಂದ್ರಾ ಬಂದರಿನಲ್ಲಿ ಪತ್ತೆಯಾದ 3,500 ಕೆ.ಜಿ ಹೆರಾಯಿನ್‌ ಪ್ರಕರಣವನ್ನು ಇತ್ಯರ್ಥಗೊಳಿಸಲು ಎಷ್ಟು ಲಂಚದ ಮೊತ್ತ ಕೇಳಲಾಗಿದೆಯೋ ಎಂದು ಸಾಮ್ನಾ ಪ್ರಶ್ನಿಸಿದೆ.

ಆ ಪ್ರಕರಣವನ್ನು ಯಾವಾಗ ಮುಚ್ಚಲಾಯಿತು ಎಂಬುದೇ ಯಾರಿಗೂ ತಿಳಿದಿಲ್ಲ. ಆದರೆ ಆರ್ಯನ್ ಖಾನ್ ಪ್ರಕರಣ ಇನ್ನೂ ನಡೆಯುತ್ತಿದೆ ಎಂಬುದನ್ನು ಬೊಟ್ಟುಮಾಡಿ ತೋರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು