ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು- ಕಾಶ್ಮೀರ: ಲಾಲ್‌ಚೌಕ್‌ನಿಂದ ತಿರಂಗ ಯಾತ್ರೆಗೆ ಚಾಲನೆ

ಪ್ರತ್ಯೇಕತಾವಾದಿಗಳ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ನಿಯೋಜನೆ
Last Updated 25 ಜುಲೈ 2022, 11:29 IST
ಅಕ್ಷರ ಗಾತ್ರ

ಶ್ರೀನಗರ:1999ರ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಬಿಜೆಪಿ ಹಮ್ಮಿಕೊಂಡಿರುವ ತಿರಂಗ ಬೈಕ್ ರ‍್ಯಾಲಿಗೆ ಸೋಮವಾರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಲಾಲ್‌ಚೌಕ್‌ನಿಂದ ಚಾಲನೆ ನೀಡಲಾಯಿತು.

ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕದವರೆಗಿನ ಯಾತ್ರೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಂಗ್‌, ಸಂಸದ ತೇಜಸ್ವಿ ಸೂರ್ಯ ಅವರು ಹಸಿರು ನಿಶಾನೆ ತೋರಿದರು. ಸುಮಾರು ನೂರಕ್ಕೂ ಹೆಚ್ಚು ಬೈಕ್‌ಗಳು ರ‍್ಯಾಲಿಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಬಿಜೆಪಿ ನಾಯಕರು ತಿರಂಗ ಹಿಡಿದು, ‘ಆಜಾದ್ ಹಿಂದೂಸ್ತಾನ್ ಜಿಂದಾಬಾದ್‌’, ‘ಅಖಂಡ ಭಾರತ ಜಿಂದಾಬಾದ್‌’ ಘೋಷಣೆ ಕೂಗಿದರು.

ಲಾಲ್‌ಚೌಕ್‌ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಕಾರಣ ಅಹಿತಕರ ಘಟನೆಗಳು ನಡೆಯದಂತೆಭಾರಿ ಬಿಗಿ ಭದ್ರತೆಯಲ್ಲಿ ಐತಿಹಾಸಿಕ ‘ಘಂಟಾ ಘರ್‌’ (ಕ್ಲಾಕ್‌ ಟವರ್‌)ನಲ್ಲಿ ಬೈಕ್‌ ರ‍್ಯಾಲಿಯನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಮೇಲೆ ನಿಗಾ ವಹಿಸಲು ಭದ್ರತಾ ಪಡೆ ಡ್ರೋನ್‌ಗಳನ್ನು ಬಳಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT