ಗುರುವಾರ , ಅಕ್ಟೋಬರ್ 6, 2022
23 °C

ಕೇರಳದಲ್ಲಿ ಬಿಜೆಪಿಗೆ ಭವಿಷ್ಯ: ಅಮಿತ್‌ ಶಾ ಹಗಲುಗನಸು: ಸಿಪಿಎಂ ನಾಯಕ ಬೇಬಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದಲ್ಲಿ ಬಿಜೆಪಿಗೆ ಭವಿಷ್ಯ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಗಲುಕನಸು ಕಾಣುತ್ತಿದ್ದಾರೆ’ ಎಂದು ಸಿಪಿಎಂ ನಾಯಕ ಎಂ.ಎ ಬೇಬಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಬಿಜೆಪಿಯು ಇಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮ್ಮೇಳನದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ ಅವರು, ‘ಕಮ್ಯುನಿಸ್ಟ್‌ ಪಕ್ಷವು ಜಗತ್ತಿನಿಂದಲೇ ಕಾಣೆಯಾಗಲಿದೆ. ಬಿಜೆಪಿಗೆ ಮಾತ್ರ ದೇಶದಲ್ಲಿ ಭವಿಷ್ಯ ಇದೆ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘2016ರಲ್ಲಿ ಕಾಂಗ್ರೆಸ್‌ ಮತಗಳನ್ನು ಪಡೆದು ನೇಮಮ್‌ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ನಂತರ 2021ರಲ್ಲಿ ಈ ಕ್ಷೇತ್ರವನ್ನು ಸಿಪಿಎಂ ಗೆದ್ದುಕೊಂಡಿದೆ. ಕೇರಳದಲ್ಲಿ ಕಮಲ ಅರಳಿಸುವ ಬಗ್ಗೆ ಅಮಿತ್‌ ಶಾ ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಅರಳಿದ್ದ ಒಂದೇ ಒಂದು ಕಮಲದ ಹೂವು ಈಗ ಕೊಳೆತು ಹೋಗಿದೆ’ ಎಂದರು.

‘ವಿರೋಧಿ ಪಕ್ಷಗಳಿಂದ ಅದರಲ್ಲೂ ಕಾಂಗ್ರೆಸ್‌ನಿಂದ ಶಾಸಕರನ್ನು, ಸಂಸದರನ್ನು ಬಿಜೆಪಿ ಖರೀದಿಸಿದೆ. ಇದು ಬಿಜೆಪಿಯ ಭ್ರಷ್ಟ ರಾಜಕಾರಣ. ಜೊತೆಗೆ ಕಾಂಗ್ರೆಸ್‌ ಶಾಸಕರೂ ತಮ್ಮನ್ನು ಬಿಜೆಪಿ ಖರೀದಿಸಲಿ ಎಂದು ಬಯಸುತ್ತಾರೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು