ಶುಕ್ರವಾರ, ಮಾರ್ಚ್ 24, 2023
23 °C

ಬಿಜೆಪಿಯಿಂದ ಪ್ರಾದೇಶಿಕ ಪಕ್ಷಗಳಿಗೆ ಕುತ್ತು: ನಿತೀಶ್ ಬೆಂಬಲಕ್ಕೆ ಶರದ್ ಪವಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಾದೇಶಿಕ ಮಿತ್ರಪಕ್ಷಗಳನ್ನು ನಿಧಾನವಾಗಿ ಮುಗಿಸುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದು ಆರೋಪಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿ ಜೊತೆಗಿನ ಸಖ್ಯ ತೊರೆದು ಬಂದ ನಿತೀಶ್ ಕುಮಾರ್ ಅವರ ನಿಲುವನ್ನು ಬೆಂಬಲಿಸಿದ್ದಾರೆ.

‘ಬಿಜೆಪಿ ರೀತಿಯ ಸಿದ್ಧಾಂತ ಆಧರಿತ ಪಕ್ಷಗಳು ಭವಿಷ್ಯದಲ್ಲಿ ಉಳಿಯಲಿದ್ದು, ಕುಟುಂಬ ಆಧರಿತ ಪಕ್ಷಗಳು ನಿರ್ನಾಮವಾಗಲಿವೆ’ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇತ್ತೀಚೆಗೆ ಹೇಳಿದ್ದರು. ‘ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅವು ಅಸ್ತಿತ್ವದಲ್ಲಿರಬಾರದು ಎಂಬುದು ಬಿಜೆಪಿ ಅಧ್ಯಕ್ಷರ ನಿಲುವು. ಅವರ ಪಕ್ಷ ಮಾತ್ರ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿದೆ. ಇದರರ್ಥ ಪ್ರಾದೇಶಿಕ ಪಕ್ಷಗಳನ್ನು ನಿಧಾನವಾಗಿ ಮುಗಿಸುವುದು ಬಿಜೆಪಿ ಉದ್ದೇಶ. ನಿತೀಶ್ ಸಹ ಇದನ್ನೇ ಆರೋಪಿಸಿದ್ದರು’ ಎಂದು ಪವಾರ್ ಹೇಳಿದರು. 

ಸ್ಪೀಕರ್‌ ವಿರುದ್ಧ ಅವಿಶ್ವಾಸ (ಪಟ್ನಾ ವರದಿ): ನೂತನ ಆಡಳಿತಾರೂಢ ಮಹಾಮೈತ್ರಿಯು ಬಿಹಾರ ವಿಧಾನಸಭೆ ಸ್ಪೀಕರ್ ವಿಜಯಕುಮಾರ್‌ ಸಿನ್ಹಾ ವಿರುದ್ಧ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ ಎಂದು ಜೆಡಿಯುನ ಹಿರಿಯ ಮುಖಂಡ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರು ಪ್ರಮಾಣ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ. ಮಹಾಮೈತ್ರಿಯ ಅಂಗಪಕ್ಷಗಳ ಶಾಸಕರು ಸಹಿ ಮಾಡಿರುವ ನೋಟಿಸ್‌ಅನ್ನು ವಿಧಾನಸಭೆ ಸೆಕ್ರೆಟರಿಯೇಟ್‌ಗೆ ಸಲ್ಲಿಸಲಾಗಿದೆ ಎಂದೂ
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು