ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಮನೆ ಎದುರು ಗೌತಮ್ ಗಂಭೀರ್, ಮನೋಜ್ ತಿವಾರಿ ಧರಣಿ

Last Updated 9 ಡಿಸೆಂಬರ್ 2020, 10:23 IST
ಅಕ್ಷರ ಗಾತ್ರ

ನವದೆಹಲಿ:ಬಿಜೆಪಿ ಆಡಳಿತವಿರುವ ಪುರಸಭೆ ನಿಗಮಗಳ ನಾಯಕರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಹೊರಗೆ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಂಸದ ಗೌತಮ್ ಗಂಭೀರ್ ಹಾಗೂ ಮನೋಜ್ ತಿವಾರಿ ಸಹ ಬುಧವಾರ ಧರಣಿನಿರತರ ಜತೆಗೂಡಿದ್ದಾರೆ.

ಉತ್ತರ, ದಕ್ಷಿಣ ಹಾಗೂ ಪೂರ್ವ ದೆಹಲಿಯ ಪುರಸಭೆ ಮೇಯರ್‌ಗಳಾದ ಜಯಪ್ರಕಾಶ್, ಅನಾಮಿಕ ಮಿಥಿಲೇಶ್ ಹಾಗೂ ನಿರ್ಮಲ್ ಜೈನ್ ಮತ್ತು ಮಹಿಳಾ ಕೌನ್ಸಿಲರ್‌ಗಳು ಕೇಜ್ರಿವಾಲ್ ಅವರ ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ನಿವಾಸದ ಎದುರು ಸೋಮವಾರದಿಂದ ಧರಣಿ ನಡೆಸುತ್ತಿದ್ದಾರೆ.

ದೆಹಲಿ ಸರ್ಕಾರದಿಂದ ದೊರೆಯಬೇಕಿರುವ ₹13,000 ಕೋಟಿ ಬಾಕಿಯನ್ನು ಪಾವತಿಸುವಂತೆ ಧರಣಿನಿರತರು ಆಗ್ರಹಿಸಿದ್ದಾರೆ.

‘ಕೇಜ್ರಿವಾಲ್ ತಾನು ಆಮ್ ಆದ್ಮಿ ಎಂದು ಹೇಳಿಕೊಂಡರೂ ಅವರು ಜನಸಾಮಾನ್ಯರ ವಿರೋಧಿಯಾಗಿದ್ದಾರೆ. ಹೀಗಾಗಿ ಅವರ ಸರ್ಕಾರವು ಪುರಸಭೆ ನಿಗಮಗಳಿಗೆ ₹13,000 ಕೋಟಿ ಬಾಕಿ ಉಳಿಸಿಕೊಂಡಿದೆ. ನೈರ್ಮಲ್ಯ ಕಾರ್ಮಿಕರು, ವೈದ್ಯರು, ಶುಶ್ರೂಷಕಿಯರು ಹಾಗೂ ಇತರ ಉದ್ಯೋಗಿಗಳಿಗೆ ವೇತನ ಪಾವತಿಸಲು ಈ ಮೊತ್ತ ಅಗತ್ಯವಾಗಿದೆ’ ಎಂದು ತಿವಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT