ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ನೇತೃತ್ವದಲ್ಲಿ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿ: ನಡ್ಡಾ ಭರವಸೆ

ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ.

ಬಿಜೆಪಿ, ಪಕ್ಷೇತರ ಶಾಸಕರು ಮತ್ತು ಬಿಜೆಪಿಯ ಪುದುಚೇರಿ ಘಟಕದ ಅಧ್ಯಕ್ಷರನ್ನೊಳಗೊಂಡ ನಿಯೋಗವು ಗುರುವಾರ ನಡ್ಡಾ ಅವರನ್ನು ಭೇಟಿಯಾಗಿತ್ತು.

ನಿಯೋಗದ ಜತೆ ಮಾತುಕತೆ ಬಳಿಕ ಟ್ವೀಟ್ ಮಾಡಿರುವ ನಡ್ಡಾ, ‘ಪುದುಚೇರಿ ಶಾಸಕರ ನಿಯೋಗವನ್ನು ಭೇಟಿಯಾದೆ. ನಮ್ಮ ಪರ ಜನಾದೇಶ ನೀಡಿದ ಪುದುಚೇರಿಯ ಜನರಿಗೆ ಆಭಾರಿಯಾಗಿದ್ದೇವೆ. ಎನ್‌ಡಿಎ ಸರ್ಕಾರದಿಂದ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ’ ಎಂದು ಉಲ್ಲೇಖಿಸಿದ್ದಾರೆ.

ಸ್ಪೀಕರ್ ಎಂಬಲಂ ಆರ್ ಸೆಲ್ವಂ, ಮತ್ತು ಬಿಜೆಪಿಯ ಪುದುಚೇರಿ ಘಟಕದ ಅಧ್ಯಕ್ಷ ವಿ. ಸ್ವಾಮಿನಾಥನ್, ಎ. ನಮಶಿವಾಯಂ, ಕೆ.ಲಕ್ಷ್ಮಿನಾರಾಯಣನ್, ಎಕೆ ಸಾಯಿ ಜೆ ಶ್ರವಣಕುಮಾರ್, ಪಿಎಂಎಲ್‌ ಕಲ್ಯಾಣ್ ಸೌಂದರಂ, ರಿಚರ್ಡ್ಸ್ ಜಾನ್‌ಕುಮಾರ್, ಎಂ.ಶಿವಶಂಕರ್, ಜಿ. ಅಶೋಕ್ ಶ್ರೀನಿವಾಸ್, ವಿಪಿ ರಾಮಲಿಂಗಂ ಮತ್ತು ಆರ್‌ಬಿ ಅಶೋಕ್ ಬಾಬು ನಿಯೋಗದಲ್ಲಿ ಇದ್ದರು.

ನಡ್ಡಾ ಜತೆ ಭೇಟಿಗೂ ಮುನ್ನ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪುದುಚೇರಿಯ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿತ್ತು.

ಬಳಿಕ ಟ್ವೀಟ್ ಮಾಡಿದ್ದ ಮೋದಿ, ‘ಪುದುಚೇರಿ ಶಾಸಕರ ನಿಯೋಗದ ಜತೆ ಮಾತುಕತೆ ನಡೆಸಿದೆ. ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದೆ’ ಎಂದು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT