ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020–21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಹರಿದುಬಂತು ₹477.5 ಕೋಟಿ ದೇಣಿಗೆ

Last Updated 31 ಮೇ 2022, 12:22 IST
ಅಕ್ಷರ ಗಾತ್ರ

ನವದೆಹಲಿ: 2020–21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ₹ 477.5 ಕೋಟಿಗೂ ಅಧಿಕ ಹಣ ದೇಣಿಗೆಯಾಗಿ ಬಂದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ₹ 74.50 ಕೋಟಿ ದೇಣಿಗೆ ಬಂದಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪಕ್ಷಗಳ ದೇಣಿಗೆ ವರದಿಯ ಪ್ರಕಾರ, ಬಿಜೆಪಿಗೆ ವಿವಿಧ ಸಂಸ್ಥೆಗಳು, ಟ್ರಸ್ಟ್‌ಗಳು, ವ್ಯಕ್ತಿಗಳಿಂದ ದೊರೆತಿರುವ ಒಟ್ಟು ದೇಣಿಗೆ ₹ 4,77,54,50,077 ಆಗಿದೆ.

ಬಿಜೆಪಿಯು ಮಾ.14ರಂದು ಚುನಾವಣಾ ಸಮಿತಿಗೆ 2020–21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿ ದೇಣಿಗೆ ಸ್ವೀಕೃತಿ ವರದಿ ಸಲ್ಲಿಸಿದೆ.

ಕಾಂಗ್ರೆಸ್‌ ಪಕ್ಷದ ವರದಿ ಪ್ರಕಾರ, ಪಕ್ಷಕ್ಕೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳಿಂದ ₹ 74,50,49,731 ದೇಣಿಗೆ ಬಂದಿದೆ. ಚುನಾವಣಾ ಕಾಯ್ದೆ ಪ್ರಕಾರ ₹ 20000 ಮೀರಿ ದೇಣಿಗೆ ಪಡೆದಲ್ಲಿ ಆ ಕುರಿತು ರಾಜಕೀಯ ಪಕ್ಷಗಳು ವರದಿ ಸಲ್ಲಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT