ಭಾನುವಾರ, ಆಗಸ್ಟ್ 1, 2021
21 °C
2019–20ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಹಂಚಿಕೆ: ಎಡಿಆರ್‌ ವರದಿ ಬಿಡುಗಡೆ

ಚುನಾವಣಾ ಟ್ರಸ್ಟ್‌ಗಳಿಂದ ಬಿಜೆಪಿಗೆ ₹ 276 ಕೋಟಿ; ಕಾಂಗ್ರೆಸ್‌ಗೆ ₹ 58 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚುನಾವಣಾ ಟ್ರಸ್ಟ್‌ಗಳ ಮೂಲಕ 2019–20ನೇ ಹಣಸಾಕು ವರ್ಷದಲ್ಲಿ ವಿತರಿಸಲಾದ ದೇಣಿಗೆ ಪೈಕಿ ಬಿಜೆಪಿ ₹ 276.45 ಕೋಟಿ ನೀಡಲಾಗಿದೆ. ಇದು ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾದ ಒಟ್ಟು ದೇಣಿಗೆಯ ಶೇ 76.17ರಷ್ಟಾಗಲಿದೆ.

ಮತದಾನ ಹಕ್ಕುಗಳ ಗುಂಪು ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) 2019–20ನೇ ಹಣಕಾಸು ವರ್ಷದಲ್ಲಿ ಹಂಚಿಕೆಯಾದ ದೇಣಿಗೆಗಳ ವಿವರಗಳನ್ನು ವಿಶ್ಲೇಷಿಸಿ ಸಿದ್ಧಪಡಿಸಿರುವ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷವಿದ್ದು, ₹ 58 ಕೋಟಿ ದೇಣಿಗೆಯನ್ನು ಸ್ವೀಕರಿಸಿದೆ. ಈ ಮೊತ್ತವು ಏಳು ಚುನಾವಣಾ ಟ್ರಸ್ಟ್‌ಗಳ ಮೂಲಕ ಹಂಚಲಾದ ಒಟ್ಟು ದೇಣಿಗೆಯ ಶೇ 15.88ರಷ್ಟಾಗಲಿದೆ ಎಂದು ಎಡಿಆರ್‌ ಹೇಳಿದೆ.

ಈ ಹಣಕಾಸು ವರ್ಷದಲ್ಲಿ ಅತ್ಯಧಿಕ ದೇಣಿಗೆ ನೀಡಿದ ಕಂಪನಿಗಳ ಪೈಕಿ ಜೆಎಸ್‌ಡಬ್ಲ್ಯೂ, ಅಪೊಲೊ ಟೈರ್ಸ್‌, ಇಂಡಿಯಾಬುಲ್ಸ್‌, ದೆಹಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ ಹಾಗೂ ಡಿಎಲ್‌ಎಫ್‌ ಸಮೂಹ ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದು ಸಂಸ್ಥೆ ಹೇಳಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿ ಗರಿಷ್ಠ ₹ 39.10 ಕೋಟಿ ದೇಣಿಗೆ ನೀಡಿದೆ. ಅಪೊಲೊ ಟೈರ್ಸ್‌–₹ 30 ಕೋಟಿ, ಇಂಡಿಯಾಬುಲ್ಸ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ವಿವಿಧ ಟ್ರಸ್ಟ್‌ಗಳಿಗೆ ₹ 25 ಕೋಟಿದೇಣಿಗೆ ನೀಡಿದೆ.

ವ್ಯಕ್ತಿಗತವಾಗಿ 18 ಜನರು ದೇಣಿಗೆ ನೀಡಿದ್ದು, ಈ ಪೈಕಿ 10 ಜನರು ಪ್ರುಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌ಗೆ ಒಟ್ಟು ₹ 2.87 ಕೋಟಿ ದೇಣಿಗೆ ನೀಡಿದ್ದಾರೆ. ವಿವಿಧ ಟ್ರಸ್ಟ್‌ಗಳಿಗೆ ನಾಲ್ವರು ₹ 5.50 ಲಕ್ಷ ನೀಡಿದ್ದಾರೆ. ಸ್ವದೇಶಿ ಎಲೆಕ್ಟೋರಲ್‌ ಟ್ರಸ್ಟ್‌ಗೆ ನಾಲ್ವರು ನೀಡಿದ ಒಟ್ಟು ದೇಣಿಗೆ ₹ 1 ಲಕ್ಷ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು