ಶುಕ್ರವಾರ, ಫೆಬ್ರವರಿ 3, 2023
23 °C

2021–22ನೇ ವರ್ಷ: ಬಿಜೆಪಿ ₹ 614.53 ಕೋಟಿ ದೇಣಿಗೆ ಸಂಗ್ರಹ -ಆಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜನರ ಪ್ರಾತಿನಿಧಿಕ ಕಾಯ್ದೆ ಅನ್ವಯ ಬಿಜೆಪಿ, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ತಮ್ಮ ವಾರ್ಷಿಕ ದೇಣಿಗೆ ಸಂಗ್ರಹದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಆಯೋಗವು ಮಂಗಳವಾರ ಈ ಮಾಹಿತಿಗಳನ್ನು ಪ್ರಕಟಿಸಿದೆ.

‘2021–22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಬಿಜೆಪಿಗೆ ₹ 614.53 ಕೋಟಿ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಇದು ವಿರೋಧ ಪಕ್ಷ ಕಾಂಗ್ರೆಸ್‌ಗಿಂತ ಆರು ಪಟ್ಟು ಹೆಚ್ಚಿನ ಮೊತ್ತವಾಗಿದೆ. ಕಾಂಗ್ರೆಸ್‌ಗೆ ₹95.46 ಕೋಟಿ ಸಂಗ್ರಹವಾಗಿದೆ’ ಎಂದು ಆಯೋಗ ಹೇಳಿದೆ.

‘ಪ್ರೂಡೆಂಟ್‌ ಎಲೆಕ್ಟ್ರೋರಲ್‌ ಟ್ರಸ್ಟ್‌ ಸೇರಿದಂತೆ ಹಲವು ಎಲೆಕ್ಟ್ರೋರಲ್‌ ಟ್ರಸ್ಟ್‌ ಸಂಸ್ಥೆಗಳು ಬಿಜೆಪಿಗೆ ಮುಖ್ಯ ದೇಣಿಗೆದಾರರಾಗಿದ್ದಾರೆ’ ಎಂದಿದೆ.

‘ತೃಣಮೂಲ ಕಾಂಗ್ರೆಸ್‌ಗೆ ₹43 ಲಕ್ಷ ಹಣವು ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ. ಕೇರಳದಲ್ಲಿ ಅಧಿಕಾರ ನಡೆಸುತ್ತಿರುವ ಸಿಪಿಎಂ ಪಕ್ಷಕ್ಕೆ ₹10.05 ಕೋಟಿ ದೇಣಿಗೆ ಸಂಗ್ರಹವಾಗಿದೆ. ದೆಹಲಿ, ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಹಾಗೂ ಮೂರು ರಾಜ್ಯದಲ್ಲಿ ಮಾನ್ಯತೆ ಪಡೆದಿರುವ ಆಮ್‌ ಆದ್ಮಿ ಪಕ್ಷಕ್ಕೆ ₹44.54 ಕೋಟಿ ದೇಣಿಗೆ ಸಂಗ್ರಹವಾಗಿದೆ’ ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು