ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಜತೆ ಸ್ಪರ್ಧೆಗಿಳಿದ ಉದ್ಯಮದ ರೀತಿ ವರ್ತಿಸುತ್ತಿದೆ ಕಾಂಗ್ರೆಸ್: ಬಿಜೆಪಿ

Last Updated 30 ಆಗಸ್ಟ್ 2020, 15:13 IST
ಅಕ್ಷರ ಗಾತ್ರ

ನವದೆಹಲಿ: ಫೇಸ್‌ಬುಕ್‌ ಜತೆ ಸ್ಪರ್ಧೆಗಿಳಿದ ಉದ್ಯಮ ಸಂಸ್ಥೆಯ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ಶಿವ ಪ್ರತಾಪ್ ಶುಕ್ಲಾ ಟೀಕಿಸಿದ್ದಾರೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಕಾಂಗ್ರೆಸ್ ಎರಡು ಪತ್ರಗಳನ್ನು ಬರೆದ ಬಳಿಕ ಬಿಜೆಪಿ ಈ ಅವರು ರೀತಿ ಪ್ರತಿಕ್ರಿಯಿಸಿದ್ದಾರೆ.

‘ಇದು ಕಾಂಗ್ರೆಸ್‌ ಮತ್ತು ಫೇಸ್‌ಬುಕ್ ನಡುವಣ ಸ್ಪರ್ಧೆಯಂತೆ ಕಾಣಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎಲ್ಲ ಕಂಪನಿಗಳಿಗೂ ನಿಯಮಗಳು ಒಂದೇ ರೀತಿ ಅನ್ವಯವಾಗುತ್ತವೆ. ರಾಷ್ಟ್ರ ಮತ್ತು ಸಾರ್ವಜನಿಕ ಹಿತಾಸಕ್ತಿಯೇ ನಮಗೆ ಪರಮೋಚ್ಚವಾದುದು’ ಎಂದು ಅವರು ಹೇಳಿದ್ದಾರೆ.

‘ಸಾಮಾಜಿಕ ದ್ವೇಷಕ್ಕೆ ಸಂಬಂಧಿಸಿ ಹೇಳುವುದಾದರೆ, ಇದನ್ನು ಯಾವಾಗಲೂ ಕಾಂಗ್ರೆಸ್ ಪಕ್ಷವೇ ಮಾಡಿದೆ ಮತ್ತು ಅದಕ್ಕೆ ಪುರಾವೆಗಳೂ ಇವೆ. ಬಿಜೆಪಿಯು ಇಡೀ ಸಮಾಜದ ಪಕ್ಷ. ಪ್ರತಿಯೊಬ್ಬ ದೇಶವಾಸಿಯೂ ಮೋದಿ ಸರ್ಕಾರವನ್ನು ಇಷ್ಟಪಡುತ್ತಾನೆ. ದೇಶದ ಜನತೆ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದಾರೆ. ಹೀಗಾಗಿ ಅದು ಅವರ ಸಮಸ್ಯೆಯೇ ವಿನಃ ನಮ್ಮದಲ್ಲ’ ಎಂದು ಶುಕ್ಲಾ ಹೇಳಿದ್ದಾರೆ.

ಬಿಜೆಪಿ ಮತ್ತು ಫೇಸ್‌ಬುಕ್ ನಡುವೆ ಲಾಭಕ್ಕಾಗಿ‌ ಕೊಡುಕೊಳ್ಳುವಿಕೆಯ ಸಂಬಂಧ ಏರ್ಪಟ್ಟಿದೆ ಎಂದು ಆರೋಪಿಸಿ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಕಾಂಗ್ರೆಸ್‌ ಪತ್ರ ಬರೆದಿತ್ತು. ಈ ಸಂಬಂಧ ತನಿಖೆ ನಡೆಸಲು ಸಂಸ್ಥೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆಯೂ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT