ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ‘ಡಬಲ್‌ ವಾಷಿಂಗ್‌ ಮಷಿನ್‌’ ಇದ್ದಂತೆ– ಜೈರಾಮ್‌

ಕಾಂಗ್ರೆಸ್‌ ಆರೋಪ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಟ್ವೀಟ್‌
Last Updated 7 ಮಾರ್ಚ್ 2023, 14:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ‘ಡಬಲ್‌ ವಾಷಿಂಗ್‌ ಮಷಿನ್‌’ ಇದ್ದಂತೆ. ಹಿಂದೆ ಮಾಡಿದ ಪಾಪಗಳೆಲ್ಲವೂ ಅಲ್ಲಿ ಶುದ್ಧೀಕರಿಸಲ್ಪಡುತ್ತವೆ’ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ.

‘ವಾಷಿಂಗ್‌ ಪೌಡರ್‌ ಬಿಜೆಪಿ’ ಹೆಸರಿನ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಬಿಜೆಪಿಯು ಹಾಲಿನಂತ ಬಿಳುಪು ಬರಿಸಿಕೊಂಡಿದ್ದು, ಅಲ್ಲಿ ಕಳಂಕಿತ ನಾಯಕರೂ ಹೊಳೆಯುವಂತೆ ಕಾಣುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬೆಂಬಲಿತ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಜೈರಾಮ್‌, ‘ಮೋದಿ ಅವರು ಮಂಗಳವಾರ ಈಶಾನ್ಯ ರಾಜ್ಯಗಳಲ್ಲಿ ‘ಡಬಲ್‌ ಎಂಜಿನ್‌’ ಎಂದು ಕರೆಯಲ್ಪಡುವ ಸರ್ಕಾರಗಳಿಗೆ ಚಾಲನೆ ನೀಡಿದ್ದಾರೆ. ಬಿಜೆಪಿ ಆಡಳಿತವುಳ್ಳ ರಾಜ್ಯಗಳಲ್ಲಿನ ಸರ್ಕಾರಗಳು ‘ಡಬಲ್‌ ಎಂಜಿನ್‌’ ಅಲ್ಲ. ಅವು ‘ಡಬಲ್‌ ವಾಷಿಂಗ್‌ ಮಷಿನ್‌’ ಸರ್ಕಾರಗಳು. ಅಲ್ಲಿ ಹಿಂದಿನ ಪಾಪಗಳೆಲ್ಲವೂ ತೊಳೆಯಲ್ಪಡುತ್ತವೆ’ ಎಂದು ದೂರಿದ್ದಾರೆ.

‘ಚುನಾವಣೆ ಸಮಯದಲ್ಲಿ ಕಾನ್ರಾಡ್‌ ಸಂಗ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಬಿಜೆಪಿಯು ಈಗ ಅವರ ಪಕ್ಷದ ಜೊತೆ ಕೈಜೋಡಿಸುವ ಮೂಲಕ ಮೇಘಾಲಯದಲ್ಲಿ ಹೊಸ ಸರ್ಕಾರ ರಚಿಸಿದೆ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT