ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ₹5 ಊಟದ ಯೋಜನೆ ಘೋಷಣೆ

Last Updated 9 ಫೆಬ್ರುವರಿ 2023, 9:21 IST
ಅಕ್ಷರ ಗಾತ್ರ

ಅಗರ್ತಲಾ : ತ್ರಿಪುರದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಪಡೆಯುವ ಪ್ರಯತ್ನದಲ್ಲಿರುವ ಬಿಜೆಪಿ, ಗುರುವಾರ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಸ್ವಾಯತ್ತತೆ, ರೈತರಿಗೆ ಆರ್ಥಿಕ ನೆರವು ಮತ್ತು ರಬ್ಬರ್ ಆಧಾರಿತ ಉದ್ಯಮ ವರ್ಧನೆಯ ಭರವಸೆ ನೀಡಿದೆ.

ರಾಜ್ಯದಲ್ಲಿ ಫೆಬ್ರವರಿ 16 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಬುಡಕಟ್ಟು ಸಮುದಾಯ ಮತ್ತು ಬಡ ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿದ್ಧ‍ಪಡಿಸಿರುವ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಧರ್ಮ ಗುರು ಅನುಕೂಲ್ ಚಂದ್ರ ಅವರ ಹೆಸರಿನಲ್ಲಿ ಎಲ್ಲರಿಗೂ ₹5 ಗೆ ಊಟ ನೀಡುವ ಮಹತ್ತರ ಯೋಜನೆ ಘೋಷಿಸಿದ್ದಾರೆ.

‘ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪಕ್ಷವು ಅಭಿವೃದ್ಧಿ, ಪರಿವರ್ತನೆ ಮತ್ತು ಸಾಮರಸ್ಯದ ಹಾದಿಯಲ್ಲಿ ತ್ರಿಪುರವನ್ನು ಮರು ನಿರ್ಮಿಸುತ್ತೇವೆ’ ಎಂದು ನಡ್ಡಾ ಹೇಳಿದರು.

ಪ್ರತಿ ಹೆಣ್ಣು ಮಗುವಿಗೆ ₹ 50,000 ಬಾಲಿಕಾ ಸಮೃದ್ಧಿ ಬಾಂಡ್ ನೀಡಲಾಗುವುದು ಮತ್ತು ಬುಡಕಟ್ಟು ಭಾಷೆಯಾದ ಕೊಕ್ಬೊರೊಕ್ ಅನ್ನು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಪ್ರಣಾಳಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT