ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ಕಾರ್ಯಕರ್ತರಿಗೆ ಕೈ–ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ ಬಿಜೆಪಿ ನಾಯಕ

Last Updated 9 ನವೆಂಬರ್ 2020, 4:26 IST
ಅಕ್ಷರ ಗಾತ್ರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮುಂದಿನ ಆರು ತಿಂಗಳಲ್ಲಿ ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ, ಅವರ ಕಾಲುಗಳು ಮತ್ತು ಎಲುಬುಗಳು ಮುರಿದು ಹೋಗುತ್ತವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಎಚ್ಚರಿಕೆ ನೀಡಿದ್ದಾರೆ.

ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ದಿಯಾ ಪಟ್ಟಣದಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಅನುವು ಮಾಡಿಕೊಡಲಿದೆ. ಈ ಚುನಾವಣೆಯು ರಾಜ್ಯ ಪೊಲೀಸರ ಉಪಸ್ಥಿತಿಯಿಲ್ಲದೆ, ಆದರೆ ಕೇಂದ್ರ ಪಡೆಗಳ ಉಪಸ್ಥಿತಿಯಲ್ಲಿ ನಡೆಯಲಿದೆ’ ಎಂದಿದ್ದಾರೆ. ಮುಂದುವರಿದು, ಟಿಎಂಸಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

‘ಕಿಡಿಗೇಡಿತನ ಪ್ರದರ್ಶಿಸುವ ಮಮತಾ ಅವರ ಜನರಿಗೆ ನಾನು ಹೇಳುತ್ತಿದ್ದೇನೆ. ಅವರು ಮುಂದಿನ ಆರು ತಿಂಗಳೊಳಗೆ ತಮ್ಮ ದಾರಿಯನ್ನು ಸರಿಪಡಿಸಿಕೊಳ್ಳದಿದ್ದರೆ, ಅವರ ಕೈ–ಕಾಲುಗಳು, ಎಲುಬುಗಳು ಮತ್ತು ತಲೆಗಳು ಮುರಿದುಹೋಗಲಿವೆ. ನೀವೆಲ್ಲರೂ ಮನೆಗೆ ಹೋಗುವ ಮೊದಲು ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಕಿಡಿಗೇಡಿತನವನ್ನು ಮುಂದುವರಿಸಿದರೆ, ಅವರನ್ನು ಸ್ಮಶಾನಕ್ಕೆ ಕಳುಹಿಸಲಾಗುತ್ತದೆ’ ಎಂದಿದ್ದಾರೆ.

ಈ ಹೇಳಿಗೆ ಟೀಕೆ ವ್ಯಕ್ತವಾಗಿದ್ದು, ಕಾಂಗ್ರೆಸ್ ನಾಯಕ ಜಿತಿನ್‌ ಪ್ರಸಾದ್‌ ಅವರು, ಇದು ಕೊಲೆಗಡುಕರು ಹೇಳುವಂತಹ ಮಾತು ಎಂದು ಕಿಡಿಕಾರಿದ್ದಾರೆ.

‘ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಯಾರೂ ತಮ್ಮ ರಾಜಕೀಯ ಭಾಷಣವನ್ನು ಬೀದಿ ಜಗಳದ ಮಟ್ಟಕ್ಕೆ ಅಥವಾ ಸಾಮಾನ್ಯ ಕೊಲೆಗಡುಕನ ಭಾಷೆಗೆ ಇಳಿಸಬಾರದು. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರು ಇದನ್ನೇ ನೆಚ್ಚಿಕೊಂಡಿರುವುದು ಅಸಹತ್ಯಕರ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT