ಭಾನುವಾರ, ಆಗಸ್ಟ್ 14, 2022
19 °C

‘ಎಂಎಲ್‌ಸಿ ಸ್ಥಾನಕ್ಕೆ ಬಿಜೆಪಿಯಿಂದ ದಿಸಾಳೆ ಹೆಸರು ಶಿಫಾರಸು’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ‘ಗ್ಲೋಬಲ್‌ ಟೀಚರ್‌ ಪ್ರಶಸ್ತಿ’ ವಿಜೇತ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಅವರನ್ನು ರಾಜ್ಯಪಾಲರ ನಾಮನಿರ್ದೇಶಿತ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಬಿಜೆಪಿ ಶಿಫಾರಸು ಮಾಡಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ಪ್ರವೀಣ್‌ ದಾರೇಕರ್‌ ಅವರು ತಿಳಿಸಿದ್ದಾರೆ.

ಸುಮಾರು ₹7.37 ಕೋಟಿ ನಗದು ಬಹುಮಾನವನ್ನೂ ಒಳಗೊಂಡ ಪ್ರಶಸ್ತಿಯನ್ನು ಗೆದ್ದಿರುವ ದಿಸಾಳೆ ಅವರನ್ನು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ದಾರೇಕರ್‌ ಅವರು, ಸೊಲ್ಲಾಪುರ ಜಿಲ್ಲೆಯಲ್ಲಿ ಶನಿವಾರ ಸನ್ಮಾನಿಸಿದರು. ‘ದಿಸಾಳೆ ಅವರ ಹೆಸರನ್ನು ಶಿಫಾರಸು ಮಾಡುವ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟಿಲ್‌ ಹಾಗೂ ಹಿರಿಯ ನಾಯಕ ದೇವೇಂದ್ರ ಫಡಣವೀಸ್‌ ಅವರ ಜೊತೆ ನಾನು ಮಾತನಾಡುತ್ತೇನೆ’ ಎಂದು ದಾರೇಕರ್‌ ತಿಳಿಸಿದರು.

‘ರಾಜ್ಯ ವಿಧಾನಸಭೆಯಲ್ಲಿ ದಿಸಾಳೆ ಅವರನ್ನು ಗೌರವಿಸುವಂತೆ ರಾಜ್ಯ ಸರ್ಕಾರವನ್ನು ಕೋರಿ ನಿರ್ಣಯ ಮಂಡಿಸಲು ಬಿಜೆಪಿ ಕೇಳಿಕೊಳ್ಳಲಿದೆ’ ಎಂದರು. 32 ವರ್ಷದ ದಿಸಾಳೆ ಅವರು ಸೊಲ್ಲಾಪುರದ ಪರಿತೆವಾಡಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವರ ಪ್ರಯತ್ನ ಹಾಗೂ ಭಾರತದಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ಪಠ್ಯಪುಸ್ತಕಗಳ ಕ್ರಾಂತಿಯನ್ನು ತಂದ ಹೆಗ್ಗಳಿಗೆ ಅವರದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು