ಮಂಗಳವಾರ, ಅಕ್ಟೋಬರ್ 4, 2022
26 °C
‘ಭಾರತವನ್ನು ಒಗ್ಗೂಡಿಸಿ ಯಾತ್ರೆ’

ರಾಹುಲ್ ಗಾಂಧಿ ಧರಿಸಿದ್ದ ಟಿ–ಶರ್ಟ್ ಬೆಲೆ ₹ 41 ಸಾವಿರ: ಬಿಜೆಪಿ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತವನ್ನು ಒಗ್ಗೂಡಿಸಿ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ₹41 ಸಾವಿರ ಬೆಲೆಯ ಟಿ–ಶರ್ಟ್‌ ಧರಿಸಿದ್ದರು’ ಎಂದು ಬಿಜೆಪಿ ಶುಕ್ರವಾರ ಹೇಳಿದೆ.

‘ಭಾರತ ನೋಡು’ ಎಂದು ಟ್ವೀಟ್‌ ಮಾಡಿರುವ ಬಿಜೆಪಿ, ರಾಹುಲ್‌ ಗಾಂಧಿ ಅವರ ಚಿತ್ರ ಮತ್ತು ಅವರು ಧರಿಸಿರುವ ಟಿ–ಶರ್ಟ್‌ಗೆ ಸಾಮ್ಯವಿರುವ ಟಿ–ಶರ್ಟ್‌ನ ಚಿತ್ರವನ್ನು ಪೋಸ್ಟ್‌ ಮಾಡಿದೆ. ಈ ಬ್ಲೂಬೆರ‍್ರಿ ಟಿ–ಶರ್ಟ್‌ನ ಬೆಲೆ ₹41,257 ಎಂದೂ ಹೇಳಿದೆ.

‘ರಾಹುಲ್‌ ಗಾಂಧಿ ಅವರು ಟಿ–ಶರ್ಟ್‌ ಖರೀದಿಸಲು ಸಾರ್ವಜನಿಕರ ಹಣವನ್ನು ಬಳಸಿಲ್ಲ’ ಎಂದು ರಾಹುಲ್‌ ಗಾಂಧಿಯನ್ನು ಬೆಂಬಲಿಸಿ ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

‘ನಾನು ಯಾತ್ರೆಯನ್ನು ಮುನ್ನಡೆಸುತ್ತಿಲ್ಲ. ಪಾಲ್ಗೊಳ್ಳುತ್ತಿದ್ದೇನೆ’ ಎಂದು ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಗುರುವಾರ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು