ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಡ್ರಗ್ಸ್ ಪ್ರಕರಣ: ಆರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

ಮುಂಬೈ, ಗೋವಾ ಸೇರಿದಂತೆ ವಿವಿಧೆಡೆ ಎನ್‌ಸಿಬಿ ದಾಳಿ
Last Updated 13 ಸೆಪ್ಟೆಂಬರ್ 2020, 12:16 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಬಂಧಿತವಾಗಿರುವ ಗುಂಪಿನೊಂದಿಗೆ ಸಂಭಾವ್ಯ ನಂಟು ಹೊಂದಿರುವ ಆರು ಡ್ರಗ್ ಪೆಡ್ಲರ್‌ಗಳನ್ನು ಎನ್‌ಸಿಬಿ ಬಂಧಿಸಿದೆ.

ಕರಂಜೀತ್ ಸಿಂಗ್, ದವಾನ್ ಅಂಥೋನಿ ಫರ್ನಾಂಡೀಸ್, ಅಂಕುಶ್ ಅರೆಂಜಾ ಹಾಗೂ ಇತರ ಮೂವರು ಡ್ರಗ್ ಪೆಡ್ಲರ್‌ಗಳನ್ನು ಎನ್‌ಸಿಬಿ ಬಂಧಿಸಿದೆ.

ಸುಶಾಂತ್ ಜತೆ ಲಿವ್ ಇನ್ ರಿಲೇಷನ್‌ಶಿಪ್ ಹೊಂದಿದ್ದ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್‌ನನ್ನು ಎನ್‌ಸಿಬಿ ಕಳೆದ ವಾರವೇ ಬಂಧಿಸಿದೆ.

ಮೂರು–ನಾಲ್ಕು ದಿನಗಳಿಂದ ಮುಂಬೈ ಸೇರಿದಂತೆ ವಿವಿಧೆಡೆ ಎನ್‌ಸಿಬಿ ದಾಳಿ ನಡೆಸಿದ್ದು, ಮುಂಬೈನ ಬಾಂದ್ರಾದ ಕರಂ ಜೀತ್ ಸಿಂಗ್ ಆನಂದ್ ಅಲಿಯಾಸ್ ಕೆಜಿ ಎಂಬಾತನನ್ನು ಬಂಧಿಸಿದೆ. ಈತನಿಂದ ಗಾಂಜಾ ಮತ್ತು ಚರಸ್ ಅನ್ನು ವಶಪಡಿಸಿಕೊಂಡಿದೆ.‌

ಮತ್ತೊಂದು ದಾಳಿಯಲ್ಲಿ ದವಾನ್ ಅಂಥೋನಿ ಫರ್ನಾಂಡೀಸ್, ಅಂಕುಶ್ ಅರೆಂಜಾ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಂಕುಶ್‌ನಿಂದ 42 ಗ್ರಾಂ ಚರಸ್ ಹಾಗೂ ₹ 1,12,400 ಹಣವನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ. ಇತರ ಇಬ್ಬರು ಆರೋಪಿಗಳು ಗಾಂಜಾ ಸರಬರಾಜುದಾರರಾಗಿದ್ದು, ಅವರಿಂದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಕರಂಜೀತ್‌ನಿಂದ ಡ್ರಗ್ಸ್‌ಗಳನ್ನು ಖರೀದಿಸಿರುವುದಾಗಿ ಒಪ್ಪಿಕೊಂಡಿರುವ ಅಂಕುಶ್, ಇದನ್ನು ಪ್ರಕರಣದ ಮತ್ತೊಬ್ಬ ಆರೋಪಿ ಅನುಜ್ ಕೇಶ್ವಾನಿಗೂ ಪೂರೈಸಿರುವುದಾಗಿ ಹೇಳಿಕೆ ನೀಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದ ಗೋವಾದಲ್ಲಿ ನಡೆದ ದಾಳಿಯಲ್ಲಿ ಎನ್‌ಸಿಬಿ ಮತ್ತೊಬ್ಬ ಆರೋಪಿಯನ್ನೂ ಬಂಧಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯು ಪ್ರಗತಿಯಲ್ಲಿದ್ದು, ಬಾಲಿವುಡ್‌ನ ಸೆಲೆಬ್ರಿಟಿಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದೂ ಎನ್‌ಸಿಬಿಯ ನಿರ್ದೇಶಕ (ಕಾರ್ಯಾಚರಣೆ) ಕೆ.ಪಿ.ಎಸ್. ಮಲ್ಹೋತ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT