ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಗಾರ್‌ ಪರಿಷತ್‌: ವರವರ ರಾವ್ ಶರಣಾಗತಿ ಅವಧಿ ಫೆ.5ರ ತನಕ ವಿಸ್ತರಣೆ

Last Updated 7 ಜನವರಿ 2022, 15:34 IST
ಅಕ್ಷರ ಗಾತ್ರ

ಮುಂಬೈ:ಎಲ್ಗಾರ್‌ ಪರಿಷತ್‌ ಪ್ರಕರಣದ ಆರೋಪಿ, ಕವಿ ವರವರ ರಾವ್ ಅವರ ಶರಣಾಗತಿ ದಿನಾಂಕವನ್ನು ಫೆಬ್ರವರಿ 5ರವರೆಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ವಿಸ್ತರಿಸಿದೆ.

ಪ್ರಸ್ತುತ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿರುವ ವರವರ ರಾವ್‌ ಅವರ ಶರಣಾಗತಿ ಅವಧಿಯನ್ನು ಕೇವಲ ಒಂದು ವಾರದ ತನಕ ವಿಸ್ತರಿಸಬೇಕೆಂದು ಕೋರಿರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಮೂರ್ತಿಗಳಾದ ಎಸ್‌.ಎಸ್‌ ಶಿಂಧೆ ಮತ್ತು ಎನ್‌ಆರ್‌ ಬೊರ್ಕರ್‌ ಅವರ ಪೀಠವು ವಜಾಗೊಳಿಸಿದೆ.

‘ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ತಜ್ಞರ ಪ್ರಕಾರ ಕೋವಿಡ್‌–19ನ ಮೂರನೇ ಅಲೆಯು 50–60 ದಿನಗಳವರೆಗೆ ಇರಬಹುದು. ಹಲವು ಪೊಲೀಸರು, ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ದೃಢಪಟ್ಟಿದೆ. ಹೀಗಿರುವಾಗ, 85 ವರ್ಷದ ವರವರ ರಾವ್‌ ಅವರನ್ನು ಜೈಲಿಗೆ ವಾಪಸ್‌ ಕಳುಹಿಸುವುದು ಉತ್ತಮ ನಡೆಯಲ್ಲ’ ಎಂದು ಪೀಠ ಹೇಳಿದೆ.

ನವಿ ಮುಂಬೈನತಲೋಜಾ ಕಾರಾಗೃಹದಲ್ಲಿವಿಚಾರಣಾಧೀನ ಕೈದಿಯಾಗಿದ್ದ ರಾವ್‌ ಅವರಿಗೆ ಬಾಂಬೆ ಹೈಕೋರ್ಟ್‌ ಕಳೆದ ವರ್ಷ ಫೆಬ್ರವರಿಯಲ್ಲಿ 6 ತಿಂಗಳ ತಾತ್ಕಾಲಿಕ ವೈದ್ಯಕೀಯ ಜಾಮೀನು ನೀಡಿತ್ತು.ಸೆ.5ರಂದು ಅವರು ಶರಣಾಗಬೇಕಿತ್ತು. ಆದರೆ, ಅವರು ಜಾಮೀನು ಅವಧಿಯನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.ಸದ್ಯ ವರವರ ರಾವ್ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT