ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿಗೆ 24 ರೈಲು ಟಿಕೆಟ್ ಬುಕ್ ಮಾಡಲು ಅವಕಾಶ

Last Updated 6 ಜೂನ್ 2022, 14:19 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯೂಸರ್ ಐಡಿ ಆಧಾರ್‌ಗೆ ಸಂಪರ್ಕಿಸಿದ್ದರೆಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಆ್ಯಪ್‌ ಮೂಲಕ ತಿಂಗಳಿಗೆ 24 ರೈಲು ಟಿಕೆಟ್‌ ಬುಕ್‌ ಮಾಡಲು ಸೋಮವಾರದಿಂದ ರೈಲ್ವೆ ಇಲಾಖೆ ಅವಕಾಶ ನೀಡಿದೆ.

ಈವರೆಗೆ ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಖಾತೆಯನ್ನು ಆಧಾರ್‌ಗೆ ಸಂಪರ್ಕಿಸದಿದ್ದಲ್ಲಿ ತಿಂಗಳಿಗೆ ಆರು ಮತ್ತು ಲಿಂಕ್ ಮಾಡಿದ್ದರೆ 12 ಟಿಕೆಟ್ ಮಾಡಲುಜನರಿಗೆ ಅವಕಾಶ ಮಾಡಿಕೊಟ್ಟಿತ್ತು.

‘ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ, ಆಧಾರ್ ಲಿಂಕ್ ಮಾಡದ ಯೂಸರ್ ಐಡಿ ಮೂಲಕ ತಿಂಗಳಿಗೆ ಗರಿಷ್ಠ 6 ಟಿಕೆಟ್‌ ಬುಕ್ ಮಾಡುವ ಮಿತಿಯನ್ನು 12 ಟಿಕೆಟ್‌ಗೆ ಹಾಗೂ ಬಳಕೆದಾರರ ಐಡಿ ಮೂಲಕ ತಿಂಗಳಿಗೆ ಗರಿಷ್ಠ 12 ಟಿಕೆಟ್‌ ಬುಕ್ ಮಾಡುವ ಮಿತಿಯನ್ನು 24 ಟಿಕೆಟ್‌ಗೆ ಹೆಚ್ಚಿಸಲು ನಿರ್ಧರಿಸಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT