ಸೋಮವಾರ, ಮೇ 23, 2022
30 °C

ವೈದ್ಯರ ಶಿಫಾರಸ್ಸಿನ ಮೇರೆಗೆ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್‌: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ರೂಪಾಂತರಿ ‘ಓಮೈಕ್ರಾನ್‌’ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌–19 ಲಸಿಕೆ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಹತ್ತರ ಘೋಷಣೆಗಳನ್ನು ಮಾಡಿದರು. 

ಹೆಚ್ಚುವರಿ (ಬೂಸ್ಟರ್‌) ಡೋಸ್‌ ಕುರಿತೂ ಅವರು ಈ ವೇಳೆ ಘೋಷಣೆಗಳನ್ನು ಮಾಡಿದರು. ದೇಶದ ಮುಂಚೂಣಿ ಕಾರ್ಯಕರ್ತರ ಜೊತೆ, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್‌ ಡೋಸ್‌ ಪಡೆಯಬಹುದು. ಆದರೆ ಅವರು ವೈದ್ಯರಿಂದ ಶಿಫಾರಸ್ಸು ಪಡೆದಿರಬೇಕು. ಅವರಿಗೂ ಜ.10 ರಿಂದಲೇ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.  

ಕೋವಿಡ್‌ ವಿರುದ್ಧದ ಜಗತ್ತಿನ ಮೊದಲ ಡಿಎನ್‌ಎ ಲಸಿಕೆ ಮತ್ತು ಮೂಗಿನ ಮೂಲಕ ನೀಡಲಾಗುವ ಲಸಿಕೆಗಳನ್ನು ಸದ್ಯದಲ್ಲೇ ಭಾರತದಲ್ಲೂ ನೀಡಲಾಗುವುದು ಎಂದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು