ಬುಧವಾರ, ನವೆಂಬರ್ 25, 2020
21 °C

ಬೀಳುತ್ತಿದ್ದ ಕಟ್ಟಡದಿಂದ 75 ನಿವಾಸಿಗಳನ್ನು ಕಾಪಾಡಿದ ಯುವಕ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಮುಂಬೈ: ಎರಡು ಅಂತಸ್ತಿನ ಕಟ್ಟಡದ ಸುಮಾರು 75 ನಿವಾಸಿಗಳನ್ನು ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಕಾಪಾಡಿರುವ ಪ್ರಸಂಗ ಗುರುವಾರ ಬೆಳಗ್ಗೆ ಮುಂಬೈ ಸಮೀಪದ ಡೊಂಬಿವಲಿಯಲ್ಲಿ ನಡೆದಿದೆ.

ಮುಂಜಾನೆ ವರೆಗೆ ವೆಬ್‌ ಸೀರಿಸ್‌ ನೋಡುತ್ತಿದ್ದ 18 ವರ್ಷದ ಯುವಕ ಕುನಾಲ್ ಮೊಹಿತೆ, ಕಟ್ಟಡ ಉರುಳುತ್ತಿರುವ ಮುನ್ಸೂಚನೆ ಪಡೆದು ನಿವಾಸಿಗಳನ್ನು ರಕ್ಷಿಸಿದ್ದಾನೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿರುವ ಕುನಾಲ್‌, 'ನಾನು ಬೆಳಗ್ಗೆ 4 ಗಂಟೆಯವರೆಗೆ ವೆಬ್ ಸರಣಿಯನ್ನು ವೀಕ್ಷಿಸುತ್ತಿದ್ದೆ. ಮನೆಯ ಅಡುಗೆ ಕೋಣೆಯ ಒಂದು ಭಾಗ ಇದ್ದಕ್ಕಿದ್ದಂತೆ ಕೆಳಗೆ ಬೀಳಲಾರಂಭಿಸಿತು. ತಕ್ಷಣ ನನ್ನ ಕುಟುಂಬ ಸದಸ್ಯರನ್ನು ಎಚ್ಚರಗೊಳಿಸಿದೆ. ಕಟ್ಟಡ ಬೀಳುವುದಕ್ಕೂ ಮೊದಲು ಎಲ್ಲರೂ ಹೊರಬರುವಂತೆ ನಿವಾಸಿಗಳಿಗೆ ತಿಳಿಸಿದೆ,' ಎಂದು ಹೇಳಿಕೊಂಡಿದ್ದಾನೆ.

ಅಧಿಕೃತ ಮೂಲಗಳ ಪ್ರಕಾರ, ಡೊಂಬಿವಲಿ ಪ್ರದೇಶದಲ್ಲಿನ ಈ ಕಟ್ಟಡವನ್ನು ಒಂಬತ್ತು ತಿಂಗಳ ಹಿಂದೆ ಅಪಾಯಕಾರಿ ಎಂದು ಘೋಷಿಸಲಾಗಿತ್ತು. ಅಲ್ಲದೆ, ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿತ್ತು.

'ಸ್ಥಳೀಯಾಡಳಿತದಿಂದ ನಮಗೆ ನೋಟಿಸ್‌ ಬಂದಿದ್ದು ಸತ್ಯ. ಆದರೆ, ಇಲ್ಲಿನವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಅವರಿಗೆ ಬೇರೆಡೆಗೆ ಹೋಗಲು ಸ್ಥಳವೂ ಇಲ್ಲ. ಹಾಗಾಗಿಯೇ ಎಲ್ಲರೂ ಇಲ್ಲೇ ಉಳಿದಿದ್ದರು.' ಎಂದು ಕುನಾಲ್‌ ತಿಳಿಸಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು